ಬಜಪೆ : ಪುಟ್ಟ ಹೆಣ್ಣು ಮಗುವನ್ನುಬರ್ಬರವಾಗಿ ಕೊಂದಿರುವ ದುರುಳರಿಗೆ ಶೀಘ್ರವೇ ಕಠಿಣ ಶಿಕ್ಷೆಯಾಗಬೇಕು. ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಯಾಗಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಯವರು ಹೇಳಿದರು.
ಗುರುಪುರ ಸಮೀಪದ ಪರಾರಿ ಎಂಬಲ್ಲಿ ಹೆಂಚಿನ ಕಾರ್ಖಾನೆಯಲ್ಲಿ ಗುತ್ತಿಗೆಯಾಧರಿಸಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯ ಕುಟುಂಬವೊಂದರ 8 ವರ್ಷದ ಹೆಣ್ಣು ಮಗುವನ್ನು ಭಾನುವಾರ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದು ನೀರಿನ ಮೋರಿಯೊಳಗೆಸೆದ ಘಟನೆಯನ್ನು ಖಂಡಿಸಿ ಇಂದು ಸಂಜೆ ಪರಾರಿ ದ್ವಾರದೆದುರು ಮಂಗಳೂರು, ವಾಮಂಜೂರು, ಉಳಾಯಿಬೆಟ್ಟು, ಗುರುಪುರ ನಾಗರಿಕರು ನಡೆಸಿದ ಶ್ರದ್ಧಾಂಜಲಿ ಮತ್ತು ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.ಘಟನೆಯಿಂದ ಪರಿಸರದಲ್ಲಿ ಹೆಣ್ಣು ಮಕ್ಕಳು ತಿರುಗಾಡಲು ಭಯಭೀತರಾಗಿದ್ದಾರೆ ಎಂದರು.
ಮಗುವಿನ ಭಾವಚಿತ್ರಕ್ಕೆ ಹಣತೆ ದೀಪ ಹಚ್ಚಿ ನಾಗರಿಕರು ಶ್ರದ್ಧಾಂಜಲಿ ಅರ್ಪಿಸಿದರು. ಸಭೆಯಲ್ಲಿ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್ ಸಾಲ್ಯಾನ್, ಹರೀಶ್ ಮೂಡುಶೆಡ್ಡೆ,ಹಿಂದೂ ಸಂಘಟನೆಗಳ ಮುಖಂಡರು, ಗುರುಪುರ, ಮೂಡುಶೆಡ್ಡೆ, ಉಳಾಯಿಬೆಟ್ಟು ಗ್ರಾಮ ಪಂಚಾಯತ್‍ಗಳ ಸದಸ್ಯರು ಮತ್ತು ವಾಮಂಜೂರು, ಗುರುಪುರ, ಉಳಾಯಿಬೆಟ್ಟು ಪ್ರದೇಶದ ಮಹಿಳೆಯರು, ಮಕ್ಕಳು, ಹಿರಿಯರು ಪಾಲ್ಗೊಂಡಿದ್ದರು.
Kshetra Samachara
24/11/2021 12:14 am