ಮಂಗಳೂರು: 'ನೈತಿಕ ಪೊಲೀಸ್ ಗಿರಿ' ನಡೆಸಿದ ಆರು ಮಂದಿಯನ್ನು ಸೋಮವಾರ ಪೊಲೀಸರು ನಗರದ ಸುರತ್ಕಲ್ ನಲ್ಲಿ ಬಂಧಿಸಿದ್ದಾರೆ.
ಸುರತ್ಕಲ್ ಬಳಿಯ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಬಗ್ಗೆ ಆರೋಪಿಸಲಾಗಿದೆ. ಈ ಕುರಿತು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರನ್ನು ಪ್ರಹ್ಲಾದ್, ಪ್ರಶಾಂತ್, ಗುರು ಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಎಂದು ಗುರುತಿಸಲಾಗಿದೆ.
ಕೇರಳ ಮೂಲದ ಅನ್ಯ ಧರ್ಮದ ಯುವಕ - ಯುವತಿ ಬೈಕಲ್ಲಿ ಹೋಗುತ್ತಿದ್ದಾಗ ಫಾಲೋ ಮಾಡಿದ ಯುವಕರ ತಂಡ ಸುರತ್ಕಲ್ ನ ಖಾಸಗಿ ಅಪಾರ್ಟ್ ಮೆಂಟ್ ಬಳಿ ಯುವಕನಿಗೆ ಥಳಿಸಿದ್ದಾರೆ. ಅಲ್ಲದೆ, ಅನ್ಯಧರ್ಮೀಯ ಯುವಕನ ಜೊತೆ ಓಡಾಡುತ್ತೀಯಾ? ಅಂತ ಯುವತಿಗೆ ಧಮ್ಕಿ ಹಾಕಿದ್ದರು.
ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಯುವತಿಯು ತಾನು ವಾಸವಿದ್ದ ಅಪಾರ್ಟ್ ಮೆಂಟ್ ಖಾಲಿ ಮಾಡಿ ಮತ್ತೊಂದು ಅಪಾರ್ಟ್ ಮೆಂಟ್ ಗೆ ಶಿಫ್ಟಿಂಗ್ ಮಾಡುವಾಗ ಯುವಕ ಮಹಮ್ಮದ್ ಯಾಸೀನ್ ಎಂಬಾತ ತನ್ನ ಬೈಕ್ ನಲ್ಲಿ ಡ್ರಾಪ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
16/11/2021 07:34 am