ಮಂಗಳೂರು: ನಗರದ ಅಶೋಕ ನಗರದಲ್ಲಿ ಎರಡು ಮಕ್ಕಳೊಂದಿಗೆ ಮಹಿಳೆ ನಾಪತ್ತೆಯಾದ ಪ್ರಕರಣಕ್ಕೆ ವಿಚಿತ್ರ ತಿರುವು ದೊರಕಿದ್ದು, ಇದೀಗ ಆಕೆಯ ಮನೆಯಲ್ಲಿದ್ದದು ಪತಿಯಲ್ಲ ಬದಲಾಗಿ ಲಿವಿಂಗ್ ರಿಲೇಷನ್ ಶಿಪ್ ನಲ್ಲಿರುವ ಪ್ರಿಯಕರ ಎಂಬುದು ಬೆಳಕಿಗೆ ಬಂದಿದೆ.
ಮಂಗಳೂರಿನಲ್ಲಿ ಅಶೋಕ ನಗರದಲ್ಲಿ ವಾಸಿಸುತ್ತಿದ್ದ ಗದಗ ಮೂಲದ ಮಹಿಳೆ ತನ್ನಿಬ್ಬರು ಮಹಿಳೆ ನಾಪತ್ತೆಯಾಗಿದ್ದಾಳೆಂದು ಉರ್ವ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ ಎಂದು ಹೇಳಿಕೊಂಡು ಬಂದ ಯುವಕ ದೂರು ದಾಖಲಿಸಿದ್ದ. ಪ್ರಕರಣದ ಜಾಡು ಹಿಡಿದು ಮಹಿಳೆಯ ಪತ್ತೆ ಕಾರ್ಯಾಚರಣೆಗೆ ಹೊರಟ ಪೊಲೀಸರಿಗೆ ಯುವಕ ಮತ್ತು ನಾಪತ್ತೆಯಾದ ಮಹಿಳೆಯು ಪತಿ-ಪತ್ನಿಯರಲ್ಲ ಬದಲಾಗಿ ಇವರ ಮಧ್ಯೆ ಲಿವಿಂಗ್ ರಿಲೇಷನ್ ಶಿಪ್ ಸಂಬಂಧವಿದೆ ಎಂಬ ಸತ್ಯ ತಿಳಿದು ಬಂದಿದೆ.
ನಾಪತ್ತೆಯಾದ ಮಹಿಳೆಗೆ ವಿವಾಹವಾಗಿದ್ದು, ಎರಡು ಮಕ್ಕಳೂ ಇದೆ. ಆದರೆ ಆಕೆಯ ಪತಿ ದುರ್ಮರಣಕ್ಕೀಡಾಗಿದ್ದ. ಆ ಬಳಿಕ ಈ ಯುವಕನ ಪರಿಚಯವಾಗಿ ಸಲಿಗೆ ಬೆಳೆದು ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಆರು ವರ್ಷಗಳ ಕಾಲ ಜೊತೆಗಿದ್ದರು. ಹೊರಗಿನ ಸಮಾಜಕ್ಕೆ ತಿಳಿಯದಂತೆ ಪತಿ-ಪತ್ನಿಯರಂತೆ ಬದುಕುತ್ತಿದ್ದರು. ಆದರೆ ಈ ನಡುವೆ ಯುವಕನ ಹಿಂಸೆ ತಾಳಲಾರದೆ ಆತ ತನ್ನ ಊರಿಗೆ ಹೋದಾಗ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಪರಾರಿಯಾಗಿದ್ದಾಳೆ. ವಾಪಸ್ ಬಂದಾಗ ಮಹಿಳೆ ಇರದಿರುವುದನ್ನು ಕಂಡು ಪೊಲೀಸ್ ದೂರು ದಾಖಲಿಸಿದ್ದಾನೆ. ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ ಬಳಿಕ ಯುವಕನ ಚಿತ್ರಹಿಂಸೆ ಹಾಗೂ ಲಿವಿಂಗ್ ರಿಲೇಷನ್ ಶಿಪ್ ಬಗ್ಗೆ ಬಾಯಿ ಬಿಟ್ಟಿದ್ದಾಳೆ.
Kshetra Samachara
22/09/2021 07:19 pm