ಉಡುಪಿ: ಜಿಲ್ಲೆಯಲ್ಲಿ ಗೋವು ಕಳ್ಳರ ಅಟ್ಟಹಾಸ ಮುಂದುವರಿದಿದೆ. ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ಎರಡು ಹಸುಗಳ ಸಾಗಾಟ ಮಾಡುತ್ತಿದ್ದಾಗ ಹಿಂದೂ ಸಂಘಟನೆಗಳು ಅಡ್ಡಗಟ್ಟಿದ ಘಟನೆ ಇಂದು ರಾತ್ರಿ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ ನಡೆದಿದೆ.
ಗೋಕಳ್ಳರ ಕೃತ್ಯದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಶಿರ್ಲಾಲು ಎಂಬಲ್ಲಿ ಗೋವು ಕಳ್ಳರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರುತಿ 800 ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/09/2021 10:07 pm