ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮತಾಂತರ ಕೇಂದ್ರಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನುಗ್ಗಿದ್ದು ,ಪ್ರಾರ್ಥನಾ ಕೇಂದ್ರದಲ್ಲಿ ಘರ್ಷಣೆಯ ವಾತಾವರಣ ನಿರ್ಮಾಣಗೊಂಡಿದೆ.ಕಾರ್ಕಳದ ಕುಕ್ಕುಂದೂರು ಗ್ರಾಮದ ನಕ್ರೆ ಆನಂದಿ ಮೈದಾನ ಎಂಬಲ್ಲಿ ಈ ಘಟನೆ ನಡೆದಿದೆ.ಮತಾಂತರ ಕೇಂದ್ರದ ಮೇಲೆ ಹಿಂದೂ ಕಾರ್ಯಕರ್ತರಿಂದ ಏಕಾಏಕಿ ದಾಳಿ ನಡೆದಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ!
ಹಿಂದೂ ಸಂಘಟನೆ ಮುತ್ತಿಗೆ ಹಾಕಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವ ಪ್ರಯತ್ನ ನಡೆಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಇಲ್ಲಿನ ಪ್ರಗತಿ ಸೆಂಟರ್ , ಮತಾಂತರ ಕೆಲಸದಲ್ಲಿ ನಿರತವಾಗಿದೆ ಎಂಬುದು ಹಿಂದೂ ಸಂಘಟನೆಯ ಆರೋಪ. ದಿಡೀರ್ ದಾಳಿಯಿಂದ ಪ್ರಾರ್ಥನಾ ನಿರತರುಕಕ್ಕಾಬಿಕ್ಕಿಯಾಗಿದ್ದಾರೆ.ಇವತ್ತು ಅರವತ್ತಕ್ಕೂ ಹೆಚ್ಚು
ಮಕ್ಕಳು ಮತ್ತು ಮಹಿಳೆಯರನ್ನು ಕೂಡಿಹಾಕಿಕೊಂಡು ಅಕ್ರಮವಾಗಿ ಪ್ರಾರ್ಥನೆ ನಡೆಸಲಾಗುತ್ತಿತ್ತು ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಬೆನಡಿಕ್ಟ್ ಎಂಬಾತನ ನೇತೃತ್ವದಲ್ಲಿ ಇಲ್ಲಿ ನಿರಂತರವಾಗಿ ಮತಾಂತರ ಕಾರ್ಯ ನಡೆಯುತ್ತಿದೆ ಎಂದು ಮುಖಂಡರು ಆರೋಪಿಸಿದ್ದಾರೆ.ದಿಢೀರ್ ದಾಳಿ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಪ್ರಾರ್ಥನಾ ನಿರತರ ನಡುವೆ ಘರ್ಷಣೆ ನಡೆದಿದೆ.
Kshetra Samachara
10/09/2021 12:38 pm