ಉಡುಪಿ: ಪ್ರೇಯಸಿಗೆ ಚೂರಿ ಇರಿದು ತಾನೂ ಕತ್ತು ಕುಯ್ದುಕೊಂಡ ಯುವಕ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸಂದೇಶ್ ಕುಲಾಲ್(29) ಮೃತಪಟ್ಟ ಯುವಕ.ನಿನ್ನೆ ಸಂಜೆ ಪ್ರೇಯಸಿ ಸೌಮ್ಯಶ್ರೀಯ ಕತ್ತು ಸೀಳಿದ್ದ ಪ್ರಿಯಕರ ಸಂದೇಶ್ ,ತಾನೂ ಕತ್ತು ಕುಯ್ದುಕೊಂಡಿದ್ದ.ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸೌಮ್ಯಶ್ರೀ ಭಂಡಾರಿ(28) ಮೃತಪಟ್ಟಿದ್ದಳು. ಸೌಮ್ಯ ಶ್ರೀ,
ಉಡುಪಿಯ ಅಂಬಾಗಿಲು ನಿವಾಸಿಯಾಗಿದ್ದರೆ, ಸಂದೇಶ್ ಕುಲಾಲ್ ಉಡುಪಿಯ ಅಲೆವೂರು ನಿವಾಸಿ.ಈತ ಸೌಮ್ಯಳನ್ನು ಪ್ರೀತಿಸುತ್ತಿದ್ದ.
ಮೂರು ದಿನಗಳ ಹಿಂದೆಯಷ್ಟೇ ಸೌಮ್ಯಳ ನಿಶ್ಚಿತಾರ್ಥ ಬೇರೊಬ್ಬ ಯುವಕನೊಂದಿಗೆ ಆಗಿತ್ತು.ಇದೇ ವಿಚಾರದಲ್ಲಿ ನಿನ್ನೆ ಸಂತೆಕಟ್ಟೆ ಪ್ರದೇಶದ ಹೆದ್ದಾರಿ ನಡುವೆ ವಾಗ್ವಾದಕ್ಕಿಳಿದ ಸಂದೇಶ್, ಪ್ರೇಯಸಿ ಸೌಮ್ಯಳ ಸ್ಕೂಟಿ ತಡೆದು ಪ್ರಶ್ನಿಸಿ ಕತ್ತು ಕುಯ್ದಿದ್ದ. ಆಕೆ ಕುಸಿದು ಬೀಳುತ್ತಿದ್ದಂತೆ,ತಾನೂ ಚಾಕುವಿನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.ಈಗ ಇಬ್ಬರೂ ಸಾವನ್ನಪ್ಪಿದ್ದಾರೆ.
ಮಣಿಪಾಲದ ಕೆಎಂಸಿಯ ಶವಾಗಾರದಲ್ಲಿ ಯುವಕ ಹಾಗೂ ಯುವತಿಯ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ.
Kshetra Samachara
31/08/2021 08:43 am