ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾನಂಪಾಡಿ ಕೆಂಪುಗುಡ್ಡೆ ಬಳಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೃತ ಯುವಕನನ್ನು ಸ್ಥಳೀಯ ನಿವಾಸಿ ರಘುನಾಥ್ (35) ಎಂದು ಗುರುತಿಸಲಾಗಿದೆ.
ಮೃತ ಯುವಕ ರಘುನಾಥ ಮುಲ್ಕಿ ಪರಿಸರದಲ್ಲಿ ಕೂಲಿ, ಮರದ ಕೆಲಸ ಮಾಡಿಕೊಂಡಿದ್ದು ಜೀವನ ಸಾಗಿಸಿ ಕೊಂಡಿದ್ದ. ಕಳೆದ ಕೆಲವು ದಿನಗಳಿಂದ ಕೆಲಸವಿಲ್ಲದೆ ತಿರುಗಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸೋಮವಾರ ಸಂಜೆ ಸುಮಾರು 3 ಗಂಟೆಗೆ ಕಾರ್ನಾಡು ಬಸ್ ನಿಲ್ದಾಣದಲ್ಲಿ ಉಳಿದುಕೊಂಡಿದ್ದವ ಏಕಾಏಕಿ ಕೆಂಪುಗುಡ್ಡೆ ಬಳಿಯ ತಂದೆ ಸುಬ್ರಹ್ಮಣ್ಯ ವಾಸವಾಗಿದ್ದ ಶೆಡ್ ಒಳಗಡೆ ಬಂದು ಪಕ್ಕಾಸಿಗೆ ಶಾಲಿನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೆಲಹೊತ್ತಿನ ಬಳಿಕ ತಂದೆ ಸುಬ್ರಹ್ಮಣ್ಯ ಶೆಡ್ ಒಳಗೆ ಬಂದು ನೋಡಿದಾಗ ಮಗ ರಘುನಾಥ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಏಕಾಏಕಿ ನಡೆದ ಘಟನೆ ಗಾಬರಿಗೊಂಡ ತಂದೆ ಕೂಡಲೇ ಮೂಲ್ಕಿ ಪೊಲೀಸ್ ಠಾಣೆಗೆ ತಿಳಿಸಿದ್ದು ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ರಘುನಾಥ ನ ಜೇಬಿನಲ್ಲಿ ಚೀಟಿ ಸಿಕ್ಕಿದ್ದು "ನನ್ನ ಸಾವಿಗೆ ನಾನೇ ಕಾರಣ" ಎಂದು ಬರೆದಿದ್ದಾನೆ. ಕೆಲಸವಿಲ್ಲದೆ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ತನಿಖೆ ನಡೆಸುತ್ತಿದ್ದಾರೆ.
ಮೃತ ಯುವಕ ತೆಂಗಿನ ಮರ ಹತ್ತುವುದರಲ್ಲಿ ಚಾಕಚಕ್ಯತೆ ಹೊಂದಿದ್ದು ಕಳೆದ ಕೆಲ ವರ್ಷಗಳ ಹಿಂದೆ ತೆಂಗಿನ ಮರದಿಂದ ಬಿದ್ದು ಪವಾಡಸದೃಶ ಪಾರಾಗಿದ್ದ ಎಂದು ನಿಕಟವರ್ತಿಗಳು ತಿಳಿಸಿದ್ದಾರೆ.
Kshetra Samachara
30/08/2021 07:36 pm