ಉಡುಪಿ: ಉಡುಪಿಯ ರೆಡ್ ಕ್ರಾಸ್ ಕಚೇರಿಯ ಜಗಳ ಇವತ್ತು ಬೀದಿಗೆ ಬಂದಿದೆ. ಇತ್ತಂಡಗಳ ನಡುವಿನ ಜಟಾಪಟಿಗೆ ಇವತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಾಕ್ಷಿಯಾಯ್ತು.
ಸಭಾಪತಿ ಖುರ್ಚಿ ಗಾಗಿ ಬಸ್ರೂರು ರಾಜೀವ್ ಶೆಟ್ಟಿ ಮತ್ತು ತಲ್ಲೂರು ಶಿವರಾಮ್ ಶೆಟ್ಟಿ ಮದ್ಯೆ ಕಚೇರಿಯಲ್ಲೇ ಗಲಾಟೆ ನಡೆದಿದೆ.
ಮಾಜಿ ಸಭಾಪತಿ ಮತ್ತು ಹಾಲಿ ಸಭಾಪತಿಯ ತಂಡಗಳ ನಡುವೆ ಅಕ್ಷರಶಃ ಇವತ್ತು ಕಿತ್ತಾಟ ನಡೆಯಿತು.
ಮಾಜಿ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಅಧಿಕಾರ ವಹಿಸಿಕೊಳ್ಳಲು ಬಂದ ವೇಳೆ ಜಟಾಪಟಿ ನಡೆದಿದ್ದು ಪೊಲೀಸರು ಮಧ್ಯಪ್ರವೇಶಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ರೆಡ್ ಕ್ರಾಸ್ ಹೆಸರಲ್ಲಿ ಬಸ್ರೂರು ರಾಜೀವ ಶೆಟ್ಟಿ ಪ್ರತ್ಯೇಕ ಟ್ರಸ್ಟ್ ರಚಿಸಿ ಅವ್ಯವಹಾರ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಅವರು ಸಭಾಪತಿ ಆಗಿದ್ದ ವೇಳೆ ರೆಡ್ ಕ್ರಾಸ್ ಹೆಸರನ್ನು ದುರುಪಯೋಗ ಮಾಡಿದ್ದ ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲೆಯಲ್ಲಿ ರಾಜೀವ ಶೆಟ್ಟಿ ರೆಡ್ ಕ್ರಾಸ್ ನ ಪ್ರಾಥಮಿಕ ಸದಸ್ಯತ್ವವನ್ನೂ ಕಳೆದುಕೊಂಡಿದ್ದಾರೆ.
ಕೋರ್ಟ್ ಆದೇಶ ಇದ್ದರೂ ಅದನ್ನು ಉಲ್ಲಂಘಿಸಿ ರೆಡ್ ಕ್ರಾಸ್ ಕಚೇರಿ ಪ್ರವೇಶ ಮಾಡಿದ್ದಾರೆ ಎಂದು ಈಗ ಸಭಾಪತಿಯಾಗಿರುವ ತಲ್ಲೂರು ಶಿವರಾಂ ಶೆಟ್ಟಿ ಬಣದ ತಕರಾರು.ಎರಡೂ ಬಣದ ಸದಸ್ಯರು ರೆಡ್ ಕ್ರಾಸ್ ಕಚೇರಿಯೊಳಗೆ ಅಕ್ಷರಶಃ ಕೊರಳಪಟ್ಟಿ ಹಿಡಿಯುವ ಹಂತಕ್ಕೆ ತಲುಪಿದ್ದರಾದರೂ ,ಪೊಲೀಸರು ಸ್ಥಳದಲ್ಲೇ ಇದ್ದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.ಒಟ್ಟಿನಲ್ಲಿ ಒಳಗೊಳಗೇ ಕುದಿಯುತ್ತಿದ್ದ ರೆಡ್ ಕ್ರಾಸ್ ನ ಆಂತರಿಕ ಕಚ್ಚಾಟ ಈಗ ಬೀದಿಗೆ ಬಂದಿದೆ.
Kshetra Samachara
16/08/2021 05:33 pm