ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬೆಂಗಳೂರಿನಿಂದ ಟಿಕೆಟಿಲ್ಲದೆ ರೈಲಲ್ಲಿ ಬಂದ ಬಾಲಕನ ರಕ್ಷಣೆ

ಉಡುಪಿ: ಬೆಂಗಳೂರಿನಿಂದ ಟಿಕೆಟಿಲ್ಲದೆ ಬಂದ ಅಪ್ರಾಪ್ತ ಬಾಲಕನೊಬ್ಬನನ್ನು ರಕ್ಷಣೆ ಮಾಡಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ ಘಟನೆ ನಡೆದಿದೆ.

ಉಡುಪಿ ರೈಲ್ವೆ ನಿಲ್ಡಾಣದಲ್ಲಿ ಟಿಕೇಟಿಲ್ಲದೆ ಬೆಂಗಳೂರಿನಿಂದ ಬಂದ 17 ವರ್ಷ ಪ್ರಾಯದ ಬಾಲಕನ ಬಗ್ಗೆ ಆರ್ ಪಿ ಎಫ್ ಸಬ್ ಇನ್ಸ್ಪೆಕ್ಟರ್ ಸುಧೀರ್ ಶೆಟ್ಟಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಕೂಡಲೇ ರೈಲ್ವೆ ನಿಲ್ದಾಣಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜಿಕ ಕಾರ್ಯಕರ್ತ ಯೋಗೀಶ್ ಭೇಟಿ ನೀಡಿ ಬಾಲಕನನ್ನು ಸಮಾಲೋಚನೆಗೆ ಒಳಪಡಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೋ ಅವರ ಆದೇಶದಂತೆ ಅಪ್ರಾಪ್ತ ಬಾಲಕನಿಗೆ ಸ್ಫೂರ್ತಿ ವಿಶ್ವಾಸದಮನೆ ಶಂಕರಪುರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿರುತ್ತಾರೆ.ರಕ್ಷಣಾ ಕಾರ್ಯಾಚರಣೆಯಲ್ಲಿ ಆರ್ ಪಿ ಎಫ್ ಸಿಬ್ಬಂದಿಗಳಾದ ಗುರುರಾಜ್, ಎಸ್.ಕೆ ಯಾದವ್ ,ಜಿಲ್ಲಾ ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ಒಳಕಾಡು ,ತಾರಾನಾಥ್ ಮೇಸ್ತಾ ,ಮಕ್ಕಳ ಸಹಾಯವಾಣಿಯ ಜ್ಯೋತಿ ಪಾಲ್ಗೊಂಡಿದ್ದರು.

Edited By : Nagaraj Tulugeri
Kshetra Samachara

Kshetra Samachara

13/08/2021 06:23 pm

Cinque Terre

17.83 K

Cinque Terre

0

ಸಂಬಂಧಿತ ಸುದ್ದಿ