ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಂಗಳಮುಖಿ ತಂಡಗಳ ನಡುವೆ ಗಲಾಟೆ, ನ್ಯಾಯಕ್ಕಾಗಿ ಕಮಿಷನರ್ ಗೆ ಮನವಿ...!

ಮಂಗಳೂರು: ತಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಮಂಗಳಮುಖಿಯರು ಮನವಿ ಸಲ್ಲಿಸಿದ್ದಾರೆ.ಬಳ್ಳಾರಿ, ಆಂಧ್ರ ಇತರೆಡೆಯಿಂದ ಬಂದಿರುವ ಮಂಗಳಮುಖಿಯರು ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ನವಸಹಜ ಸಮುದಾಯದ ಸಂಘಟನೆ ಮಂಗಳಮುಖಿಯರು ಆರೋಪಿಸಿದರೆ, ನಾವು ಕೊಟ್ಟಾರದಲ್ಲಿ ನಮ್ಮ ರೂಂನಲ್ಲಿ ಇದ್ದ ಸಂದರ್ಭದಲ್ಲಿ ನಾಲ್ಕೈದು ಮಂದಿ ಯುವಕರು ಬಂದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪರಿವರ್ತನಾ ಚಾರಿಟೆಬಲ್ ಸಂಘಟನೆ ಮುಖಂಡೆ ಅರುಂಧತಿ ಎಂಬುವವರು ದೂರಿದ್ದಾರೆ.

ಈ ಕುರಿತಂತೆ ಇತ್ತಂಡಗಳ ಮನವಿ ಸ್ವೀಕರಿಸಿ ಮಾತನಾಡಿದ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ರೈಲ್ವೇ ಹಳಿ ಬಳಿ ಎರಡು ಗುಂಪಿನ ನಡುವೆ ಗಲಾಟೆ ಹೊಡೆದಾಟ ನಡೆದಿದೆ. ಈ ಬಗ್ಗೆ ಇತ್ತಂಡಗಳ ದೂರು ದಾಖಲಿಸಿದ್ದೇವೆ. ತನಿಖೆ ನಡೆಸುತ್ತೇವೆ ಎಂದಿದ್ದಾರೆ.

Edited By : Manjunath H D
Kshetra Samachara

Kshetra Samachara

29/07/2021 01:43 pm

Cinque Terre

25.31 K

Cinque Terre

1

ಸಂಬಂಧಿತ ಸುದ್ದಿ