ಮಂಗಳೂರು: ಮದುವೆಯಾದ ರಾತ್ರಿಯೇ ವಧುವಿಗೆ ಹೃದಯಾಘಾತ!; ಮೃತ್ಯು
ಮಂಗಳೂರು: ನವ ದಾಂಪತ್ಯದ ಸಂಭ್ರಮದಲ್ಲಿರಬೇಕಾದ ನವವಧು ಮದುವೆಯಾದ ದಿನ ರಾತ್ರಿಯೇ ಹೃದಯಾಘಾತದಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ನಗರದ ಅಡ್ಯಾರ್ ಕಣ್ಣೂರಿನಲ್ಲಿ ನಡೆದಿದೆ.
ಅಡ್ಯಾರ್ ಕಣ್ಣೂರು ಬಿರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆ.ಎಚ್. ಕೆ. ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಅಫಿಯಾ(24) ಮೃತಪಟ್ಟರು.
ಲೈಲಾ ಅಫಿಯಾ ಅವರ ಮದುವೆ ನಿನ್ನೆಯಷ್ಟೇ ಅಡ್ಯಾರ್ ಕಣ್ಣೂರಿನ ಜುಮಾ ಮಸ್ಜಿದ್ ನಲ್ಲಿ ನಡೆದಿತ್ತು. ಅಡ್ಯಾರ್ ಗಾರ್ಡನ್ ನಲ್ಲಿ ಔತಣ ಕೂಟವೂ ಸಂಭ್ರಮದಿಂದ ಜರುಗಿತ್ತು. ರಾತ್ರಿ ವರ ಮುಬಾರಕ್ ಅತ್ತೆ ಮನೆಗೆ ಬಂದಿದ್ದರು. ನವಜೋಡಿಯೂ ಖುಷಿ- ಸಂಭ್ರಮದಲ್ಲಿತ್ತು. ಆದರೆ, ಏಕಾಏಕಿ ತಡರಾತ್ರಿ 3 ಗಂಟೆಯ ವೇಳೆಗೆ ಲೈಲಾ ಅಫಿಯಾ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸಂಭ್ರಮದಲ್ಲಿರಬೇಕಾದ ಮನೆಯೀಗ ಶೋಕತಪ್ತವಾಗಿದೆ.