ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ತಾಯಿಯ ಕುರಿತು ಸ್ಟೇಟಸ್ ಹಾಕಿ ನದಿಗೆ ಹಾರಿದ ಯುವಕ

ಬಂಟ್ವಾಳ: ಅನಾರೋಗ್ಯದಲ್ಲಿ ತಾಯಿಯನ್ನು ಉಳಿಸಲು ಸಾಧ್ಯವಾಗಿಲ್ಲ, ತಾಯಿಗಿಂತ ಮೊದಲು ತಾನೇ ಹೋಗುತ್ತೇನೆ ಎಂದು ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿ ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.

ಅನಂತಾಡಿ ಪಂತಡ್ಕ ನಿವಾಸಿ ನೀರಜ್(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಯುವಕನ ತಾಯಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಪಾಣೆ ಮಂಗಳೂರು ಸೇತುವೆಯಿಂದಯುವಕ ರಾತ್ರಿ ನದಿಗೆ ಹಾರಿದ್ದು, ಮಂಗಳವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಸೋಮವಾರ ರಾತ್ರಿ ಹುಡುಕಾಡಿದರೂ, ಯುವಕನ ಸುಳಿವು ಪತ್ತೆಯಾಗಿರಲಿಲ್ಲ. ಸ್ಥಳೀಯ ಈಜುಗಾರ ಮೊಹಮ್ಮದ್ ನಂದಾವರ ಹಾಗೂ ತಂಡ, ಬಂಟ್ವಾಳ ಅಗ್ನಿಶಾಮಕ ದಳದ ತಂಡ ಹುಡುಕಾಟ ನಡೆಸಿತ್ತು. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

09/02/2021 11:51 am

Cinque Terre

31.07 K

Cinque Terre

8

ಸಂಬಂಧಿತ ಸುದ್ದಿ