ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಭಜನಾ ಮಂದಿರ ಅಪವಿತ್ರ ಪ್ರಕರಣ; ಇಬ್ಬರು ಆರೋಪಿಗಳ ಸೆರೆ

ಮಂಗಳೂರು: ನಗರ ಹೊರವಲಯದ ಕೊಣಾಜೆ ಸಮೀಪದ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಆವರಣದಲ್ಲಿ ಮಲ, ಮೂತ್ರ ವಿಸರ್ಜಿಸಿ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಮುಹಮ್ಮದ್ ಸುಹೈಲ್ ಮತ್ತು ತಲಪಾಡಿಯ ಪಿಲಿಕೂರು ನಿವಾಸಿ ನಿಝಾಮುದ್ದೀನ್ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿ ವಿವಿಧೆಡೆ ಸಿಸಿ ಟಿವಿ ಫೂಟೇಜ್‌ನಲ್ಲಿ ದಾಖಲಾಗಿದ್ದ ಇಬ್ಬರು ಯುವಕರ ಕೃತ್ಯದ ಬೆನ್ನತ್ತಿ ಹೋದ ಸಂದರ್ಭ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರು ಶ್ರೀ ಗೋಪಾಲಕೃಷ್ಣ ಮಂದಿರದ ಕಾಣಿಕೆ ಹುಂಡಿಯಿಂದ ಹಣ ಕಳವು ಮಾಡಲು ನುಗ್ಗಿದ್ದರು.

ಆದರೆ, ಅಲ್ಲಿ ಯಾವುದೇ ಬೆಲೆಬಾಳುವ ಸೊತ್ತು ಸಿಕ್ಕಿರಲಿಲ್ಲ. ಕಾಣಿಕೆ ಡಬ್ಬಿ ಒಡೆದ ಕೃತ್ಯ ಬೇರೆ ಯಾರೋ ಮಾಡಿದ್ದಾರೆ ಎನ್ನುವ ರೀತಿ ಬಿಂಬಿಸಲು ಮಲ, ಮೂತ್ರ ವಿಸರ್ಜಿಸಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕೃತ್ಯದಲ್ಲಿ ಇನ್ನೂ ಆರು ಆರೋಪಿಗಳು ಪಾಲ್ಗೊಂಡಿರುವ ಮಾಹಿತಿ ಲಭ್ಯವಾಗಿದೆ.

Edited By : Manjunath H D
Kshetra Samachara

Kshetra Samachara

01/02/2021 06:46 pm

Cinque Terre

27.68 K

Cinque Terre

9

ಸಂಬಂಧಿತ ಸುದ್ದಿ