ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಿಸಿಬಿ ಪೊಲೀಸರಿಂದ ಕರ್ತವ್ಯದಲ್ಲಿದ್ದಾಗಲೇ ಮದ್ಯ ಪಾರ್ಟಿ!; ವೀಡಿಯೊ ವೈರಲ್

ಮಂಗಳೂರು: ಕರ್ತವ್ಯದ ಸಮಯದಲ್ಲಿಯೇ ಸಿಸಿಬಿ ಪೊಲೀಸರು ನಗರದ ಕುತ್ತಾರ್ ನ ಬಾರ್ ನಲ್ಲಿ ಪಾರ್ಟಿ ಮಾಡಿದ್ದಾರೆಂಬ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳೂರು ಸಿಸಿಬಿ ಪೊಲೀಸರು ಕುತ್ತಾರಿನ ಬಾರ್ ಒಂದರ ಹೊರಗಡೆ ವಾಹನ ನಿಲ್ಲಿಸಿ 8 ಮಂದಿ ಮದ್ಯ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆಂದು ವೀಡಿಯೊ ಹರಿದಾಡುತ್ತಿದೆ. ಈ ಸಂದರ್ಭ ಕ್ರಿಕೆಟ್ ಬುಕ್ಕಿಗಳೂ ಜೊತೆಗಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಡಿಸಿಪಿ ಹರಿರಾಂ ಶಂಕರ್ ಮಾತನಾಡಿ, ಪೊಲೀಸ್ ಟಿಟಿ ವಾಹನ ಬಾರ್ ಬಳಿಗೆ ಯಾಕೆ ಹೋಗಿದೆ, ಸಿಸಿಬಿ ಪೊಲೀಸರು ಬಾರ್ ಒಳಗೆ ಯಾಕೆ ತೆರಳಿದ್ದಾರೆಂಬ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

30/01/2021 08:28 pm

Cinque Terre

15.55 K

Cinque Terre

5

ಸಂಬಂಧಿತ ಸುದ್ದಿ