ಉಡುಪಿ: ಉಡುಪಿಯಲ್ಲಿ ನಕಲಿ ಪತ್ರಕರ್ತನೊಬ್ಬನಿಗೆ ಚೆನ್ನಾಗಿಯೇ ಗೂಸಾ ಬಿದ್ದಿದೆ.
ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಈ ನಕಲಿ ಪತ್ರಕರ್ತನಿಗೆ ಸಾರ್ವಜನಿಕರೇ ಗೂಸಾ ಕೊಟ್ಟಿದ್ದಾರೆ.
ಅವನ ಜೊತೆಗಿದ್ದ ಇನ್ನೂ ಕೆಲವು ಖದೀಮರು ಪರಾರಿಯಾಗಿದ್ದಾರೆ. ಸದ್ಯ ಗೂಸಾದ ವೀಡಿಯೊ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈತ ರೆಸಾರ್ಟ್ ಮಾಲೀಕರೊಬ್ಬರಿಗೆ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಇಂದು
ಹಣ ಕೊಡುವುದಾಗಿ ಕರೆಸಿ ಥಳಿಸಲಾಗಿದೆ. ಮಲ್ಪೆ ಪೊಲೀಸರು ಮಧ್ಯಪ್ರವೇಶ ಮಾಡಿ ಎರಡೂ ತಂಡಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಕಲಿ ಪತ್ರಕರ್ತ 50 ಸಾವಿರ ರೂ. ಲಂಚ ಕೇಳಿದ್ದ ಎಂಬ ಆರೋಪ ಕೇಳಿ ಬಂದಿದೆ.
Kshetra Samachara
17/01/2021 03:41 pm