ಮಂಗಳೂರು: ನಗರದ ತೋಟ ಬೆಂಗ್ರೆಯ ಸಮೀಪ ಫಲ್ಗುಣಿ ನದಿಯಲ್ಲಿ ತೇಲಿ ಬರುತ್ತಿದ್ದ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.
ತೋಟ ಬೆಂಗ್ರೆ ಪ್ರದೇಶದಲ್ಲಿ ನದಿಯು ಸಮುದ್ರ ಸೇರುವ ಸಂಗಮಸ್ಥಳದಲ್ಲಿ ಶಿಶುವಿನ ಶವ ತೇಲಿ ಬರುತ್ತಿರುವುದು ಮೀನುಗಾರರಿಗೆ ಕಂಡು ಬಂದಿದೆ.
ಮೀನುಗಾರಿಕೆ ಬೋಟ್ ನಲ್ಲಿದ್ದ ಮೀನುಗಾರರಾದ ರಹೀಂ ಹಾಗೂ ಫೈಸಲ್ ಎಂಬವರು ಶಿಶುವಿನ ಮೃತದೇಹವನ್ನು ಬಲೆಯ ಸಹಾಯದಿಂದ ಮೇಲಕ್ಕೆತ್ತಿ ತಕ್ಷಣ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು, ಎರಡು ದಿನಗಳ ಹಿಂದೆಯಷ್ಟೇ ಹುಟ್ಟಿರುವ ಶಿಶು ಇದಾಗಿದ್ದು, ಯಾರೋ ನದಿಗೆ ಎಸೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/01/2021 07:59 am