ಕಡಬ: ಜ್ಯೂಸ್ ಸೆಂಟರ್ ಗೆ ಬಂದಿದ್ದ ಅಪ್ರಾಪ್ತ ಹಿಂದೂ ಹುಡುಗಿಯ ಫೋಟೊ ತೆಗೆದಿದ್ದಾನೆ ಎಂದು ಆರೋಪಿಸಿ ಜ್ಯೂಸ್ ಸೆಂಟರ್ ಮುಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ ಘಟನೆ ಕಡಬದಲ್ಲಿ ನಡೆದಿದೆ.
ಅನ್ಯಕೋಮಿನ ವ್ಯಕ್ತಿಯೋರ್ವ ಜ್ಯೂಸ್ ಸೆಂಟರ್ ಗೆ ಬಂದಿದ್ದಅಪ್ರಾಪ್ತೆಯ ಫೋಟೊ ತೆಗೆದು ತನ್ನ ವಾಟ್ಸ್ ಆ್ಯಪ್ ನಲ್ಲಿ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂ ಸಂಘಟನೆಯ ಕಾರ್ಯಕರ್ತರು ಸಹಿತ ಅನೇಕರು ಜಮಾಯಿಸಿದರು. ಅಂಗಡಿಯ ವ್ಯಕ್ತಿಗಳು ಮತ್ತು ಸೇರಿದ್ದ ಜನರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಘಟನೆಗೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಕಡಬ ಪೊಲೀಸರು ವಶಕ್ಕೆ
ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
02/01/2021 10:33 pm