ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಗೋಕಳ್ಳತನ ಮುಂದುವರಿದಿದ್ದು ನಿನ್ನೆ ರಾತ್ರಿ ಗೋಕಳ್ಳರು ಮನೆಯ ಹಟ್ಟಿಯಲ್ಲಿದ್ದ ದನ ಮತ್ತು ಕೋಳಿಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಕಾರ್ಕಳ ತಾಲೂಕಿನ ಮಿಯಾರು ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮೋಹಿನಿ ಎಂಬುವರ ಮನೆಯ ಹಟ್ಟಿಗೆ ನುಗ್ಗಿದ ಕಳ್ಳರು ಗೋಕಳ್ಳತನ ಮಾಡಿದ್ದಾರೆ.
ಈ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾರ್ಕಳ ಪೊಲೀಸರು ಗೋಕಳ್ಳರಿಗಾಗಿ ಬಲೆ ಬೀಸಿದ್ದಾರೆ.
Kshetra Samachara
20/04/2022 08:34 pm