ಉಡುಪಿ: ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯನ್ನು ಖಂಡಿಸಿರುವ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಗಳು, ಇದು ಒಬ್ಬ ಕಾರ್ಯಕರ್ತನ ಹತ್ಯೆಯ ವಿಷಯ ಅಲ್ಲ, ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ.ಇಂತಹ ಘಟನೆಗಳಿಂದ ನಾವು ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಮಾಜ ಉದ್ವಿಗ್ನಗೊಂಡು ಹಿಂಸಾಚಾರಕ್ಕೆ ಇಳಿದರೆ ಅದನ್ನು ಸರಿಪಡಿಸುವುದು ಕಷ್ಟ ಸಾಧ್ಯವಾಗುತ್ತದೆ.ಹಾಗಾಗಿ ಇಂತಹ ಘಟನೆ ವಿಚಾರವಾಗಿ ಕಾರ್ಯಾಂಗ, ನ್ಯಾಯಾಂಗ ಬೇಗನೆ ಕ್ರಮ ಕೈಗೊಳ್ಳಬೇಕು.ಕೊಲೆಗಡುಕರಿಗೆ ಶಿಕ್ಷೆಯಾಗುವುದರ ಜೊತೆಗೆ, ಇನ್ನು ಮುಂದೆ ಇಂತಹ ಘಟನೆ ಮರಕಳಿಸದಂತೆ ತಕ್ಕುದಾದ ಕ್ರಮ ಕೈಗೊಳ್ಳಬೇಕು.ಸಮಾಜ ಕಾನೂನು ಕೈಗೆ ತೆಗೆದುಕೊಳ್ಳದೆ, ನ್ಯಾಯಾಂಗ ಮತ್ತು ಕಾರ್ಯಾಂಗದ ಮೇಲೆ ಒತ್ತಡ ತರುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದ್ದಾರೆ.
PublicNext
24/02/2022 01:06 pm