ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ನನ್ನ ತಾಯಿ ಮತಾಂತರ ಯತ್ನ ಮಾಡಿಲ್ಲ"; ನೂರ್ ಜಹಾನ್ ಪುತ್ರಿ ಅಳಲು

ಮಂಗಳೂರು: ಮಂಗಳೂರಲ್ಲಿ ಮೊನ್ನೆ ಕುಟುಂಬವೊಂದರ ದುರಂತ ಅಂತ್ಯದ ಹಿಂದೆ ಮತಾಂತರದ ಆರೋಪದ ಕೇಳಿಬರ್ತಿದ್ದಂತೆಯೇ ಆರೋಪಿ ಮಹಿಳೆ ನೂರ್ ಜಹಾನ್ ಪುತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

"ನನ್ನ ತಾಯಿ ಮತಾಂತರ ಯತ್ನ ಮಾಡಿಲ್ಲ. ವಿಜಯಲಕ್ಷ್ಮಿ ಕುಟುಂಬಕ್ಕೆ ಹಣಕಾಸು ಸಹಾಯ ಮಾಡಿದ್ದರು. ಜೊತೆಗೆ ಮಕ್ಕಳಿಗೆ ತಿಂಡಿ ಕೊಡುತ್ತಿದ್ದರು. ವಿಜಯಲಕ್ಷ್ಮಿಯ ಪತಿ ನಾಗೇಶ್ ಮದ್ಯ ಸೇವಿಸಿ ಅವರಿಗೆ ಹಲ್ಲೆ ಮಾಡುತ್ತಿದ್ದರು. ಆಗ ನಮ್ಮ ತಾಯಿ ಪೊಲೀಸ್ ದೂರು ಕೊಡಲು ಹೇಳಿದ್ದು ನಿಜ. ಮುಸ್ಲಿಂ ಗಂಡು ನೋಡಿ ಮದುವೆ ಮಾಡಲು ಹೋಗಿಲ್ಲ. ಆ ರೀತಿ ಮಾಡಿದ್ದಾರೆಂಬುದೆಲ್ಲ ಸುಳ್ಳು. ಇನ್ನು, ಮತಾಂತರ ಮಾಡುವ ಅಗತ್ಯವೂ ನಮಗಿಲ್ಲ ” ಎಂದು ಅಳಲು ತೋಡಿಕೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

12/12/2021 04:03 pm

Cinque Terre

24.6 K

Cinque Terre

20

ಸಂಬಂಧಿತ ಸುದ್ದಿ