ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಫುಟ್ ವೇರ್ ಅಂಗಡಿಗೆ ನುಗ್ಗಿದ ಕಳ್ಳರು; 15 ಲಕ್ಷ ನಗದು ಜೊತೆಗೆ ಸಿಸಿ ಕ್ಯಾಮೆರಾದ ಡಿವಿಆರ್ ಕಳವು

ಇನ್ನೋವಾ ಕಾರು ಖರೀದಿಗೆಂದು ಅಂಗಡಿಯಲ್ಲಿಟ್ಟಿದ್ದ ಹಣವನ್ನು ಕಳ್ಳರು ಲಪಟಾಯಿಸಿದ ಘಟನೆ ಪುತ್ತೂರಿನ ಪ್ರಕಾಶ್ ಫುಟ್ ವೇರ್ ಶಾಪ್ ನಲ್ಲಿ ಸೆಪ್ಟೆಂಬರ್ 16 ರಂದು ನಡೆದಿದೆ.

ಕಾರು ಖರೀದಿಸಲೆಂದು ಪ್ರಕಾಶ್ ಫುಟ್ ವೇರ್ ಮಾಲೀಕ ಸಮೀರ್ ಎಂಬುವರು 15 ಲಕ್ಷ ರೂಪಾಯಿಗಳನ್ನು ಅಂಗಡಿಯಲ್ಲಿ ಇಟ್ಟಿದ್ದರು. ಆದರೆ ನಿನ್ನೆ ರಾತ್ರಿ ಅಂಗಡಿಯ ಮೇಲ್ಛಾವಣಿಯ ಹೆಂಚು ತೆಗೆದು ಅಂಗಡಿ ಒಳಗೆ ನುಗ್ಗಿದ ಕಳ್ಳರು 15 ಲಕ್ಷ ಹಣವನ್ನು ಲಪಟಾಯಿಸಿದ್ದಾರೆ. ಹಣದ ಜೊತೆಗೆ ತಮ್ಮ ಕಳ್ಳತನದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ಕೂಡಾ ಕಳ್ಳರು ತಮ್ಮ ಜೊತೆ ಕೊಂಡೊಯ್ದಿದ್ದಾರೆ.

ಪುತ್ತೂರು ನಗರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಕಳ್ಳರಿಗಾಗಿ ಶೋಧ ಕಾರ್ಯ ನಡೆಸಿದೆ.

Edited By :
PublicNext

PublicNext

16/09/2022 06:21 pm

Cinque Terre

45.35 K

Cinque Terre

2

ಸಂಬಂಧಿತ ಸುದ್ದಿ