ಕುಂದಾಪುರ : ಹೆದ್ದಾರಿ ದಾಟುತ್ತಿದ್ದ ವೃದ್ಧನೊಬ್ಬನಿಗೆ ಅತೀ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ವೃದ್ಧನನ್ನು ವಲಸೆ ಕಾರ್ಮಿಕ ಬಸಪ್ಪ ಶಂಕರಪ್ಪ ಅಥಣಿ(60) ಎಂದು ಗುರುತಿಸಲಾಗಿದೆ.
ಗಾಯಾಳು ಬಸಪ್ಪ ಸೋಮವಾರ ರಾತ್ರಿ ಎಲ್.ಐ.ಸಿ. ರಸ್ತೆ ಸಮೀಪ ಎರಡು ದಿನಗಳ ಹಿಂದೆಯಷ್ಟೆ ನಿರ್ಮಿಸಲಾದ ಸರ್ವೀಸ್ ರಸ್ತೆಯಿಂದ ಹೆದ್ದಾರಿ ಸಂಪರ್ಕಿಸುವ ರಸ್ತೆಯಲ್ಲಿದ್ದರು. ಈ ಸಂದರ್ಭ ಉಡುಪಿ ಕಡೆಯಿಂದ ಬೈಂದೂರು ಕಡೆಗೆ ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ವೇಗಕ್ಕೆ ಬಸಪ್ಪ ಅವರ ಎರಡೂ ಕಾಲುಗಳ ಒಳಗೆ ತುಂಡಾಗಿದ್ದು, ತಲೆಗೂ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಕಾರಿನ ಕೆಲವು ಭಾಗಗಳು ಸ್ಥಳದಲ್ಲಿ ಉದುರಿ ಬಿದ್ದಿದ್ದು ಎಸ್ಕೇಪ್ ಆದ ಕಾರಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/10/2022 10:39 pm