ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಬೆಂಗಳೂರಿನ ಅಪಘಾತದಲ್ಲಿ ಕುಂದಾಪುರದ ಮಹಿಳೆ ಸಾವು

ಕುಂದಾಪುರ: ನಿನ್ನೆ ಬೆಂಗಳೂರಿನಲ್ಲಿ ನಡೆದ ಸ್ಕೂಟಿ ಹಾಗೂ ಟ್ಯಾಂಕರ್ ನಡುವಿನ ಅಪಘಾತದಲ್ಲಿ ಕುಂದಾಪುರದ ಬೈಂದೂರು ಸಮೀಪದ ಹೊಸ್ಕೋಟೆ ಬಳಿಯ ನಿವಾಸಿ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಹೊಸ್ಕೋಟೆ ಸಮೀಪದ ಬೊಳ್ಳುಗುಡ್ಡೆ ನಿವಾಸಿ ಪ್ರೇಮ ಪೂಜಾರಿ(35) ಸಾವನ್ನಪ್ಪಿದವರು.

ಪ್ರೇಮ ಪೂಜಾರಿ ಎರಡು ವರ್ಷದ ಹಿಂದಷ್ಟೇ ಬೆಂಗಳೂರಿಗೆ ಉದ್ಯೋಗಕ್ಕಾಗಿ ಹೋಗಿದ್ದರು. ಬೆಂಗಳೂರಿನಲ್ಲಿ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಭಾನುವಾರ ಮಧ್ಯಾಹ್ನ ತನ್ನ ಪತಿಗೆ ಸಹಕರಿಸಲೆಂದು ಹೊರಗೆ ಹೋಗಿದ್ದರೆನ್ನಲಾಗಿದೆ. ಯಲಹಂಕ ಸಮೀಪ ಅಪಘಾತ ಸಂಭವಿಸಿದ್ದು ಪ್ರೇಮ ಪೂಜಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ದೇಹವನ್ನು ಬೊಳ್ಳುಗುಡ್ಡೆಯ ಸ್ವಗೃಹಕ್ಕೆ ತರಲಾಗಿದ್ದು, ಅಂತ್ಯಕ್ರಿಯೆ ನೆರವೇರಿಸಲಾಯಿತು. ಪ್ರೇಮ ಪೂಜಾರಿಯವರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬವನ್ನು ಅಗಲಿದ್ದಾರೆ.

Edited By : PublicNext Desk
Kshetra Samachara

Kshetra Samachara

12/09/2022 10:19 am

Cinque Terre

8.13 K

Cinque Terre

1

ಸಂಬಂಧಿತ ಸುದ್ದಿ