ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಕುಮಾರಧಾರ ನದಿಗೆ ಸ್ನಾನಕ್ಕಿಳಿದ ಬೆಂಗಳೂರಿನ ಯುವಕ ಕಣ್ಮರೆ

ಸುಳ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದ ಬೆಂಗಳೂರಿನ ಶಿವು(25) ಕುಮಾರಧಾರ ನದಿಗೆ ಸ್ನಾನಕ್ಕೆಂದು ಇಳಿದು ಕಣ್ಮರೆಯಾದ ಘಟನೆ ಇಂದು ರವಿವಾರ(ಆ.21) ಮಧ್ಯಾಹ್ನ ನಡೆದಿದೆ. 21 ಜನರ ತಂಡ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿದ್ದು ಇಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದಾರೆ.

ಇವರಲ್ಲಿ ಶಿವು ಎಂಬವರು ಸ್ನೇಹಿತರ ಮಾತನ್ನು ಲೆಕ್ಕಿಸದೇ ತಡೆಹಗ್ಗ ದಾಟಿ ನೀರಿಗೆ ಇಳಿದಿದ್ದಾರೆ. ಮೂಲತಃ ಮಂಡ್ಯ ನಿವಾಸಿಯಾಗಿರುವ ಶಿವು ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು ಬೆಂಗಳೂರಿನ ದೀಪಜಲಿ ನಗರದಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಎಸ್.ಐ ಮಂಜುನಾಥ್ . ಅಗ್ನಿಶಾಮಕದಳ ಸಿಬಂದಿಗಳ ಭೇಟಿ ನೀಡಿದ್ದು ಶಿವುರವರಿಗೆ ಹುಡುಕಾಟ ನಡೆಸುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

21/08/2022 09:03 pm

Cinque Terre

13.74 K

Cinque Terre

0

ಸಂಬಂಧಿತ ಸುದ್ದಿ