ಮಂಗಳೂರು: ಮೇಯಲು ಬಿಟ್ಟಿದ್ದ ದನದ ಕಾಲು ಹಾಗೂ ದೇಹದ ಮೇಲೆ ಗಂಭೀರ ರೀತಿಯ ಗಾಯದ ಗುರುತು ಕಂಡು ಬಂದಿರುವ
ಘಟನೆ ನಗರದ ಜಪ್ಪಿನ ಮೊಗರಿನಲ್ಲಿ ನಡೆದಿದೆ.
ಜಪ್ಪಿನಮೊಗರು ನಿವಾಸಿ ವಿಶ್ವನಾಥ ಎಂಬವರು ಬೆಳಗ್ಗೆ ದನವನ್ನು ಮೇಯಲು ಬಿಟ್ಟಿದ್ದರು. ಆದರೆ, ಹೊತ್ತು ಮುಳುಗಿದರೂ ದನ
ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆ ಮಂದಿಯೆಲ್ಲ ಸೇರಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಪತ್ತೆಯಾದ ದನದ ಕಾಲು ಮುರಿದಿದ್ದು, ದೇಹದ ಭಾಗಕ್ಕೆ ಗಂಭೀರ ಗಾಯವಾಗಿದೆ. ಗರ್ಭ ಧರಿಸಿದ್ದ ದನವನ್ನು ಯಾರೋ ಗೋ ಕಳ್ಳರು ಕಳವಿಗೆ ಪ್ರಯತ್ನಿಸಿರಬಹುದು ಎಂಬ ಸಂಶಯವನ್ನು ಮನೆಯವರು ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು,
ಕಂಕನಾಡಿ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಶೋಕ್ ಪಿ. ಹಾಗೂ ಸಿಬ್ಬಂದಿ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡರು ಭೇಟಿ ನೀಡಿದ್ದಾರೆ.
Kshetra Samachara
21/09/2020 08:36 pm