ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದುರ್ಗಾ ದೌಡ್‌ನಲ್ಲಿ ತಲವಾರು ಪ್ರದರ್ಶನ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ

ಉಡುಪಿ: ಹಿಂದೂ ಜಾಗರಣ ವೇದಿಕೆಯ ವತಿಯಿಂದ ಉಡುಪಿಯಲ್ಲಿ ಇತ್ತೀಚೆಗೆ ನಡೆದಿದ್ದ ದುರ್ಗಾ ದೌಡ್ ನಲ್ಲಿ ತಲವಾರು ಪ್ರದರ್ಶಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಪೊಲೀಸ್ ಇಲಾಖೆ ತಕ್ಷಣ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ದುರ್ಗಾದೌಡ್ ಮೆರವಣಿಗೆಯು ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕೆ.ಎಂ. ಮಾರ್ಗ, ಹಳೆಯ ಡಯಾನ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಸ್ಥಳದಲ್ಲಿ ಸಮಾಪ್ತಿಗೊಂಡಿತ್ತು. ಈ ವೇಳೆ ಮೆರವಣಿಗೆಯ ಮುಂಭಾಗದಲ್ಲಿದ್ದ ಕೆಲವು ಕಾರ್ಯಕರ್ತರು ತಮ್ಮ ಕೈಯಲ್ಲಿ ತಲವಾರು ಹಿಡಿದುಕೊಂಡು ಸಾಗಿ ಬಂದಿದ್ದರು. ಈ ಮೆರವಣಿಗೆಯಲ್ಲಿ ಸಚಿವ ಸುನಿಲ್ ಕುಮಾರ್ ಸಹಿತ ಬಿಜೆಪಿಯ ಬಹುತೇಕ ಶಾಸಕರು,ಜನಪ್ರತಿನಿಧಿಗಳೂ ಭಾಗವಹಿಸಿದ್ದರು.

ಕಾನೂನು ರೂಪಿಸುವ ಸಚಿವ, ಶಾಸಕರೆದುರೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾನೂನನ್ನು ಗಾಳಿಗೆ ತೂರಿದ್ದು ಸರಿಯೆ? ಮೆರವಣಿಗೆ ಬಳಿಕ ಈ ತಲವಾರುಗಳನ್ನು ಎಲ್ಲಿ ಸಂಗ್ರಹಿಸಿಡಲಾಗಿದೆ? ಹಾಗೇ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುವುದು ತಪ್ಪಲ್ಲವೇ? ಒಂದು ವೇಳೆ ಹಿಂದೂ ಸಂಘಟನೆಗಳ ಬದಲು ಬೇರೆ ಸಮುದಾಯದವರು ತಲವಾರು ಪ್ರದರ್ಶನ ಮಾಡಿದ್ದರೆ ಪೊಲೀಸ್ ಇಲಾಖೆ ಸುಮ್ಮನೆ ಕೂರುತ್ತಿತ್ತೆ? ಈಗ ಏಕೆ ಪೊಲೀಸರು ಮೌನವಾಗಿದ್ದಾರೆ? ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು.ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಧರ್ಮಗುರು ,ಜನಪರ ಹೋರಾಟಗಾರ ಫಾ.ವಿಲಿಯಮ್ ಮಾರ್ಟಿಸ್ ಒತ್ತಾಯಿಸಿದ್ದಾರೆ.

Edited By : Nagesh Gaonkar
PublicNext

PublicNext

05/10/2022 07:16 pm

Cinque Terre

37.78 K

Cinque Terre

3

ಸಂಬಂಧಿತ ಸುದ್ದಿ