ಬೆಳ್ತಂಗಡಿ: ಕಡತ ದುರುಪಯೋಗ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ, ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕ ಜಯಚಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜಯಚಂದ್ರ ಪಿ.ಎನ್. 2018ರಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಕೊಕ್ಕಡ ಹೋಬಳಿಯ ಎನ್‌ಸಿಆರ್ ಫೈಲ್‌ಗಳ ಕೇಸ್ ವರ್ಕರ್ ಆಗಿದ್ದ. ಈ ವೇಳೆ ಆತ ಅಕ್ರಮ ಲಾಭಗಳಿಸುವ ದುರುದ್ದೇಶದಿಂದ ಸರಕಾರಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ತಾಲೂಕು ಕಚೇರಿಗೆ ಸಾರ್ವಜನಿಕರಿಂದ ಬಂದ ಎನ್‌ಸಿಆರ್ ಫೈಲ್‌ಗಳನ್ನು ಮತ್ತೋರ್ವ ಆರೋಪಿ ರಾಜು ಎಂಬಾತನಿಗೆ ನೀಡಿ ಸಾರ್ವಜನಿಕರಿಗೆ ವಂಚನೆ ಹಾಗೂ ನಂಬಿಕೆಗೆ ದ್ರೋಹ ಎಸಗಿದ್ದರು.
ಈ ವಂಚನೆ ಆರೋಪದ ಬಗ್ಗೆ ಆ.16 ರಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೆ .7ರಂದು ಜಯಚಂದ್ರನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/09/2022 10:19 pm