ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಚೆಕ್ ಅಮಾನ್ಯ ಆರೋಪ ಸಾಬೀತು- ಅಪರಾಧಿಗೆ ಶಿಕ್ಷೆ ಪ್ರಕಟ

ಕಾರ್ಕಳ: ಜೆಎಂಎಫ್‌ಸಿ ನ್ಯಾಯಾಲಯ ಚೆಕ್ ಅಮಾನ್ಯ ಪ್ರಕರಣದಲ್ಲಿ ಹೆಬ್ರಿಯ ಮೂಲದ ಅಪರಾಧಿಗೆ ಶಿಕ್ಷೆ ಪ್ರಕಟ ಮಾಡಿದೆ.

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಬ್ರಿ ಮಠದಬೆಟ್ಟು ಗೋಪಾಲ್ ನಾಯ್ಕ್ ಅವರ ಪುತ್ರ ಪ್ರಜ್ವಲ್ ಜಿ ನಾಯ್ಕ ಈತ ಹೆಬ್ರಿ ತಾಲೂಕಿನ ಆರ್ಡಿ ಗ್ರಾಮದ ಕೆರ್ಜಾಡಿ ದೊಡ್ಮನೆ ವಿಕ್ರಮ್ ಹೆಗ್ಡೆ ಇವರ ಬಳಿ 2016ರಲ್ಲಿ 4.50ಲಕ್ಷ ಸಾಲವಾಗಿ ಪಡೆದಿದ್ದ. ಆದರೆ ಹಿಂದೆ ತಿರುಗಿಸದೆ ಸಾಲದ ಮರುಪಾವತಿಗಾಗಿ ಚೆಕ್ ಅನ್ನು ನೀಡಿದ್ದು, ಬ್ಯಾಂಕ್‌ನಲ್ಲಿ ಚೆಕ್ ಬೌನ್ಸ್ ಆಗಿದೆ. ಇದರಿಂದಾಗಿ ವಿಕ್ರಮ್ ಹೆಗ್ಡೆ ಆರೋಪಿ ಪ್ರಜ್ವಲ್ ನಾಯ್ಕ್ ಇವರ ಮೇಲೆ ಕಾರ್ಕಳ ನ್ಯಾಯಾಲಯದಲ್ಲಿ ಚೆಕ್ ಕೇಸ್‌ ಹಾಕಿದ್ದಾರೆ.

ನ್ಯಾಯಾಲಯದಲ್ಲಿ ಸುದೀರ್ಘ ವಾದ ಪ್ರತಿವಾದ ನಡೆದ ನಂತರ ಆರೋಪಿ ಪ್ರಜ್ವಲ್ ನಾಯ್ಕ್ ಈತನಿಗೆ ಶಿಕ್ಷೆ ಪ್ರಕಟಗೊಳಿಸಿ ಸಾಲವಾಗಿ ಪಡೆದ ಹಣ ಮೊತ್ತ 4.50 ಲಕ್ಷ ರೂ. ಹಾಗೂ 1 ಲಕ್ಷ ರೂ. ದಂಡ ಮತ್ತು ಸರ್ಕಾರಕ್ಕೆ 5 ಸಾವಿರ ರೂ. ಒಟ್ಟು 5 ಲಕ್ಷದ 55 ಸಾವಿರ ರೂ. ಮೊತ್ತವನ್ನು 1 ತಿಂಗಳೊಳಗೆ ಪಾವತಿಸಬೇಕು. ತಪ್ಪಿದಲ್ಲಿ 6 ತಿಂಗಳ ಕಾಲ ಸಾದಾ ಸಜೆ ವಿಧಿಸಿದೆ. ವಿಕ್ರಂ ಹೆಗ್ಡೆ ಪರ ಹೆಬ್ರಿಯ ಖ್ಯಾತ ನ್ಯಾಯವಾದಿ ರತನ್ ಕುಮಾರ್ .ಎಚ್ ವಾದಿಸಿದ್ದಾರೆ .

Edited By : Vijay Kumar
Kshetra Samachara

Kshetra Samachara

09/04/2022 10:52 pm

Cinque Terre

8.34 K

Cinque Terre

0

ಸಂಬಂಧಿತ ಸುದ್ದಿ