ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ತಲೆ ಮರೆಸಿಕೊಂಡಿರುವ ಆರೋಪಿ ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ಭಟ್ ಮನೆಯನ್ನು ಇಂದು ಪಂಚರ ಸಮಕ್ಷಮ ಪೊಲೀಸರು ಶೋಧ ಕಾರ್ಯ ನಡೆಸಿದರು.
ಆರೋಪಿ ರಾಜೇಶ್ ಭಟ್ ವಿರುದ್ಧ ಸಂತ್ರಸ್ತ ಯುವತಿ ಲೈಂಗಿಕ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿ ತಿಂಗಳಾಗುತ್ತಾ ಬಂದರೂ, ಆರೋಪಿಯನ್ನು ಇನ್ನೂ ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ರಾಜೇಶ್ ಭಟ್ ತಲೆಮರೆಸಿಕೊಂಡಿದ್ದಾನೆ. ಈಗಾಗಲೇ ವಿದೇಶಕ್ಕೆ ಪರಿಯಾಗದಂತೆ ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿರುವ ಪೊಲೀಸರು, ಆತನ 12 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿತ್ತು. ಆದರೂ ಆರೋಪಿಯ ಪತ್ತೆಯಾಗಿಲ್ಲ.
ಇದೀಗ ಈ ಪ್ರಕರಣದ ತನಿಖಾಧಿಕಾರಿ ಮಂಗಳೂರು ದಕ್ಷಿಣ ಎಸಿಪಿ ರಂಜಿತ್ ಕುಮಾರ್ ಬಂಡಾರು ಅವರು ಪಂಚರ ಸಮಕ್ಷಮ ಆರೋಪಿ ರಾಜೇಶ್ ಭಟ್ ಮನೆಯನ್ನು ಶೋಧಿಸಿದ್ದಾರೆ. ಆತನ ಪತ್ತೆಗಾಗಿ ಸುಳಿವು ಲಭ್ಯತೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಏನಾದರೂ ಸುಳಿವು ಲಭ್ಯವಾಗಿದೆಯೇ ಎಂಬುದರ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.
Kshetra Samachara
17/11/2021 10:48 pm