ಮಂಗಳೂರು: ನಗರದ ಚಿಲಿಂಬಿ ಬಳಿ ಬ್ಯಾಂಕ್ ಗೆ ಕಲೆಕ್ಷನ್ ಕಟ್ಟಲು ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ 4.20ಲಕ್ಷ ರೂ. ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಉದ್ಯೋಗಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪೆಟ್ರೋಲ್ ಬಂಕ್ ಉದ್ಯೋಗಿ ಶ್ಯಾಮಶಂಕರ್, ಅಭಿಷೇಕ್, ಕಾರ್ತಿಕ್, ಸಾಗರ್ ಬಂಧಿತ ಆರೋಪಿಗಳು.
ನಗರದ ಮಣ್ಣಗುಡ್ಡೆಯಲ್ಲಿರುವ ಪೆಟ್ರೋಲ್ ಬಂಕ್ ಮ್ಯಾನೇಜರ್ ಭೋಜಪ್ಪ ಸೆ.28ರಂದು ಬ್ಯಾಂಕ್ ಗೆ ಕಲೆಕ್ಷನ್ ಕಟ್ಟಲು ದ್ವಿಚಕ್ರ ವಾಹನದಲ್ಲಿ ತೆರಳಿರುವ ಸಂದರ್ಭ ಅವರಿಗೆ ಹಲ್ಲೆ ನಡೆಸಿ ದರೋಡೆಗೈಯಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಪೆಟ್ರೋಲ್ ಬಂಕ್ ಉದ್ಯೋಗಿ ಶ್ಯಾಮ್ ಶಂಕರ್ ನನ್ನು ವಿಚಾರಣೆ ನಡೆಸಿದಾಗ ಆತನೇ ಇತರರೊಂದಿಗೆ ಸೇರಿ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ತಕ್ಷಣ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೃತ್ಯವನ್ನು ಎಸಗಲು ಬಳಸಿರುವ ಎರಡು ವಾಹನಗಳು, ಮೊಬೈಲ್ ಫೋನ್ ಗಳು ಹಾಗೂ 60 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದ್ದು, ವಾಹನಗಳನ್ನು ನೀಡಿ ಸಹಕಾರ ನೀಡಿದವರ ಬಂಧನವಾಗಬೇಕಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ತಿಳಿಸಿದ್ದಾರೆ.
Kshetra Samachara
05/10/2021 05:26 pm