ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಮಹಿಳಾ ಸುರಕ್ಷತೆಗಾಗಿ ಒಂದು ದಿನ": ನಾಳೆ 112ಗೆ ಕರೆ ಮಾಡಿದ್ದಲ್ಲಿ ಪೊಲೀಸ್ ತಂಡ ನೀವಿದ್ದಲ್ಲಿಗೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ "ಮಹಿಳಾ ಸುರಕ್ಷತೆಗಾಗಿ ಒಂದು ದಿನ" ಕಾರ್ಯಕ್ರಮವನ್ನು ಆ‌.28ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಆಯೋಜಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್‌. ಹೇಳಿದರು.

ಈ ಹಿನ್ನೆಲೆಯಲ್ಲಿ 112 ಸಂಖ್ಯೆಗೆ ಯಾರಾದರೂ ಕರೆ ಮಾಡಿದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ಪಿಎಸ್ಐಗೆ ಮೇಲ್ಪಟ್ಟ ಅಧಿಕಾರಿಗಳು ಅಂದರೆ ಕಮಿಷನರ್ ಆಫ್ ಪೊಲೀಸ್ ಸೇರಿದಂತೆ ಡಿಸಿಪಿ, ಎಸಿಪಿ, ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್ ಸೇರಿದಂತೆ ಅವರದ್ದೇ ಪ್ರತ್ಯೇಕ ತಂಡ ಸ್ಥಳಕ್ಕೆ ಧಾವಿಸಿ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ನಡೆಸಲಾಗುತ್ತದೆ. ಈ ಕಾರ್ಯಕ್ರಮ ಮುಖ್ಯವಾಗಿ ಮಹಿಳಾ ಸುರಕ್ಷತೆಗಾಗಿ ಆಯೋಜನೆ ಮಾಡಲಾಗಿದೆ.

ನಾನೂ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಪೊಲೀಸ ತಂಡ ನಾಳೆ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮಹಿಳೆಯರ ಸಮಸ್ಯೆಗಳಿಗೆ ERSS ಹಾಗೂ ಸರಕಾರಿ ವಾಹನಗಳಲ್ಲಿ ತಕ್ಷಣ ಅವರಿರುವ ಸ್ಥಳಕ್ಕೆ ಧಾವಿಸಲಿದೆ. ಮಂಗಳೂರನ್ನು ಸುರಕ್ಷಿತವಾಗಿಡಲು, ಮಹಿಳೆಯರ ಸುರಕ್ಷತೆಗಾಗಿ ಇದೊಂದು ಸಣ್ಣ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್‌. ಹೇಳಿದರು.

Edited By : Nagaraj Tulugeri
Kshetra Samachara

Kshetra Samachara

27/08/2021 10:48 pm

Cinque Terre

35.11 K

Cinque Terre

1

ಸಂಬಂಧಿತ ಸುದ್ದಿ