ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ಪತ್ರಕರ್ತರ ವಿರುದ್ಧ ವಿದ್ಯಾರ್ಥಿನಿ ದೂರು

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದದ ಕುರಿತಾಗಿ ನಡೆಯುತ್ತಿರುವ ಘಟನಾವಳಿಗಳ ಮಾಹಿತಿ ಪಡೆಯಲು ಪ್ರಾಂಶುಪಾಲರಲ್ಲಿಗೆ ತೆರಳಿದ ಪತ್ರಕರ್ತ ರ ಮೇಲೆ ವಿದ್ಯಾರ್ಥಿಗಳ ಗುಂಪೊಂದು ದಿಗ್ಭಂಧನ ವಿಧಿಸಿ, ವಿಡಿಯೋ ಡಿಲೀಟ್ ಮಾಡಿ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತ ರು ದೂರು ನೀಡಿದ್ದಾರೆ.

ಸದ್ಯ ಪತ್ರಕರ್ತರ ದೂರು ನೀಡಿರುವ ಬೆನ್ನಲ್ಲೇಯೇ ವಿದ್ಯಾರ್ಥಿನಿಯೋರ್ವಳು ಮೂವರು ಪತ್ರಕರ್ತರ ವಿರುದ್ಧ ಪ್ರತಿದೂರು ನೀಡಿದ್ದು, ಜಾತಿ ನಿಂದನೆ ಮಾಡಿ, ಆಕೆಯ ಶಾಲು ಎಳೆದು ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾಳೆ.

ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಪತ್ರಕರ್ತ ರಾದ ಅಜಿತ್ ಕುಮಾರ್ ಕೆ., ಪ್ರವೀಣ್ ಕುಮಾರ್, ಸಿದ್ಧೀಕ್ ನೀರಾಜೆ ಅವರ ವಿರುದ್ಧ ದೂರು ನೀಡಿದ್ದಾಳೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ಈ ಆರೋಪವನ್ನು ಪತ್ರಕರ್ತರು ಅಲ್ಲಗಳೆದಿದ್ದು, ಇದೊಂದು ಸುಳ್ಳು ದೂರು. ಕಾಲೇಜಿನ ಸಿಸಿ ಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸಲಿ ಆಗ ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದ್ದಾರೆ.

Edited By :
Kshetra Samachara

Kshetra Samachara

04/06/2022 09:04 am

Cinque Terre

15.48 K

Cinque Terre

1

ಸಂಬಂಧಿತ ಸುದ್ದಿ