ಕಡಬ : ತಾಲೂಕಿನ ಕುಮಾರಧಾರ ಮತ್ತು ಗುಂಡ್ಯ ನದಿಯಿಂದ ವಿವಿಧೆಡೆಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದರೂ ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದರೂ ಮರಳು ಸಾಗಾಟ ವಾಹನವನ್ನು ವಶಕ್ಕೆ ಪಡೆದುಕೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿದ್ದು ಇದರಿಂದ ಅಕ್ರಮ ಮರಳು ಸಾಗಾಟದಾರರಿಗೆ ಪ್ರೋತ್ಸಾಹ ನೀಡಿದಂತಾಗುತ್ತಿರುವ ಘಟನೆಗಳು ನಡೆಯುತ್ತಿದೆ.
ನ.28ರ ರಾತ್ರಿ ಹೊಸಮಠ ನಾಡೋಳಿ ಸಮೀಪ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಲಾಗಿದ್ದು, ಮರಳು ತುಂಬಿದ ಒಂದು ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಇನ್ನೆರಡು ವಾಹನಗಳು ಪರಾರಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.
ಗಣಿ ಇಲಾಖೆ ಅಧಿಕಾರಿಗಳು ಹಾಗೂ ಕಡಬ ತಹಶೀಲ್ದಾರ್ ಏನು ಮಾಡುತ್ತಿದ್ದಾರೆ
ಈಗಾಗಲೇ ದ,ಕ ಜಿಲ್ಲಾಧಿಕಾರಿಯವರು ಅಕ್ರಮ ಮರಳು ಸಾಗಾಟ ವಿಚಾರದಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ನಮ್ಮ ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ, ಅಕ್ರಮ ಮರಳು ಸಾಗಾಟ ರಾತ್ರಿ ವೇಳೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಗಣಿ ಇಲಾಖಾ ಅಧಿಕಾರಿಗಳು ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ, ಅಲ್ಲದೆ ಕಡಬ ತಹಸೀಲ್ದಾರ್ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಮತ್ತು ಪೋಲಿಸರಿಗೆ ಅಕ್ರಮ ಮರಳು ಸಾಗಾಟದ ಪಿನ್ ಟು ಪಿನ್ ಮಾಹಿತಿ ಲಭ್ಯ ಇದ್ದರೂ ಅವರು ಸಾರ್ವಜನಿಕರು ದೂರು ನೀಡದೆ ಅಕ್ರಮ ಮರಳು ಸಾಗಾಟವನ್ನು ತಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಅಕ್ರಮ ಮರಳು ಸಾಗಾಟಗಾರರಿಗೆ ದುಷ್ಮನ್ಗಳಾದ ಮಾಧ್ಯಮ ಪ್ರತಿನಿಧಿಗಳು.
ಈಗಾಗಲೇ ಅಕ್ರಮ ಮರಳು ಸಾಗಾಟದಾರರಿಗೆ ಮಾಧ್ಯಮ ಪ್ರತಿನಿಧಿಗಳು ಮಾತ್ರ ದುಷ್ಮನ್ಗಳಾಗಿದ್ದಾರೆ, ಅಕ್ರಮ ಮರಳು ಸಾಗಾಟದಾರರು ಹೇಳುವ ಪ್ರಕಾರ "ಮೀಡಿಯದಲ್ಲಿ ಪ್ರಸಾರ ಆಗದಿದ್ದರೆ ಬೇರೆ ಏನು ಸಮಸ್ಯೆ ಇಲ್ಲ, ಪೋಲಿಸರಿಗೆ ಮಾಮೂಲು ಕೊಟ್ಟು ಸರಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಕ್ರಮ ಮರಳು ಸಾಗಾಟ ಆಗುತ್ತಿರುವ ಖಚಿತ ಮಾಹಿತಿ ಪೋಲಿಸರಿಗೆ ನೀಡಿದ ಮೇಲೆ ಆ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತದೆ, ಆದರೆ ಅದೇ ವೇಳೆ ಪ್ರಕರಣ ದಾಖಲು ಮಾಡುತ್ತಿಲ್ಲ, ಬದಲಾಗಿ ಮಾಧ್ಯಮ ಪ್ರತಿನಿಧಿಗಳಲ್ಲಿ ಮಾತುಕತೆ ನಡೆಸುತ್ತಾ ಹಣದ ಆಮೀಷ ಒಡ್ಡುತ್ತಾರೆ,ಮಾಧ್ಯಮ ಪ್ರತಿನಿಧಿಗಳ ಮೇಲೆ ಸುಳ್ಳು ಪ್ರಕರಣಗಳೂ ಕಡಬ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ದಾಖಲಾಗಿತ್ತು. ಒಟ್ಟಿನಲ್ಲಿ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಮಾಧ್ಯಮ ಪ್ರತಿನಿಧಿಗಳು ಅನಿವಾರ್ಯವಾಗಿ ಮಾಡುವಂತಾಗಿದ್ದು ಇದರಿಂದ ಮಾಧ್ಯಮ ಪ್ರತಿನಿಧಿಗಳ ಜೀವಕ್ಕೂ ಅಪಾಯ ಎದುರಾಗಿದೆ. ಒಟ್ಟಿನಲ್ಲಿ ಅಕ್ರಮ ಮರಳು ಸಾಗಾಟದಾರಿಗೆ ಮಾಧ್ಯಮದವರು ಮಾತ್ರ ದುಷ್ಮನ್ಗಳಾಗಿದ್ದಾರೆ.
Kshetra Samachara
29/11/2020 06:20 pm