ಬೈಂದೂರು: ಉಡುಪಿ, ಕುಂದಾಪುರದಲ್ಲಿ ಸ್ಕಾರ್ಫ್ ವಿವಾದ ತಲೆದೋರಿರುವ ಮಧ್ಯೆ ಇತ್ತ ಗಡಿಭಾಗ ಬೈಂದೂರಿನಲ್ಲಿ ಹಿಂದೂ ಸಂಘಟನೆಯವರು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ತೊಡಿಸಿದ್ದಾರೆ.
ಒತ್ತಾಯ ಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿಸಿದ ಹಿಂದೂ ಸಂಘಟನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹೊರಗಡೆ ಸ್ಕಾರ್ಫ್ ಧರಿಸಿ ಕಾಲೇಜು ಒಳಗಡೆ ತೆಗೆಯುತ್ತಿದ್ದರು. ಇದನ್ನು ಸಹಿಸದ ಹಿಂದೂ ಸಂಘಟನೆಗಳು ಉದ್ದೇಶ ಪೂರ್ವಕವಾಗಿ ವಿವಾದಕ್ಕೆ ತುಪ್ಪ ಸುರಿಯುವ ಯತ್ನ ಮಾಡಿವೆ.
ಸದ್ಯ ಕಾಲೇಜು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿಸಿದ ಹಿಂದೂ ಸಂಘಟನೆಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
PublicNext
04/02/2022 11:50 am