ಮಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ನಿರೂಪಕಿ, ನಟಿ ಅನುಶ್ರೀ ಹೆಸರು ಹೇಳಿದ್ದ ಡ್ಯಾನ್ಸರ್ ಕಿಶೋರ್ ರಕ್ಷಣೆಗೆ ಶಾಸಕರೊಬ್ಬರು ಭಾರೀ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಆರೋಪಿ ಕಿಶೋರ್‌ನನ್ನು ಬಂಧಿಸಿದ ದಿನವೇ ದೊಡ್ಡ ಲಾಬಿ ನಡೆದಿತ್ತು. ಆತನನ್ನು ಕೈ ಬಿಡುವಂತೆ ಕರಾವಳಿಯ ಶಾಸಕರೊಬ್ಬರು ಒತ್ತಡ ಹೇರುತ್ತಿದ್ದಾರೆ. ಶಾಸಕನ ಒತ್ತಡ ಸಫಲ ಆಗಿದ್ದರೆ ಅನುಶ್ರೀ ಸೇರಿದಂತೆ ಎಲ್ಲರೂ ಬಚಾವ್ ಆಗುತ್ತಿದ್ದರು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಒತ್ತಡ ಯಾಕೆ?: ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರು ಕಿಶೋರ್ ಕೇಸ್ ಕೈಬಿಡುವಂತೆ ಒತ್ತಾಯಿಸಿದ ಶಾಸಕನಿಗೆ ಆಪ್ತರಾಗಿದ್ದಾರೆ. ಅಷ್ಟೇ ಅಲ್ಲದೆ ವ್ಯಕ್ತಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ರೂವಾರಿ. ಕಿಶೋರ್ ಕೂಡ ಆ ಪ್ರತಿಷ್ಠಿತ ವ್ಯಕ್ತಿ ಸಲಹೆಯಂತೆ ಬುಕ್ಕಿಗಳಿಗೆ ಡ್ರಗ್ಸ್ ಪಾರ್ಟಿ ಕೊಟ್ಟಿದ್ದ ಎನ್ನಲಾಗಿದೆ.
Kshetra Samachara
01/10/2020 05:52 pm