ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಉಜಿರೆಯ ಬಾಲಕನ ಕಿಡ್ನಾಪ್ ಪ್ರಕರಣದ ಆರು ಮಂದಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಸುಳಿವು ಸಿಗದೆ ಪೊಲೀಸರು ತಲೆಕೆಡಿಸಿಕೊಂಡಿದ್ದರು. ಈ ವೇಳೆ ಒಂದು ಫೋನ್ ಕರೆ ಆರೋಪಿಗಳನ್ನು ಪತ್ತೆ ಹಚ್ಚೋಕೆ ನೆರವಾಗಿತ್ತು. ಡಿ.17ರ ಸಂಜೆ ಬಾಲಕ ಅನುಭವ್ ಕಿಡ್ನಾಪ್ ಆದ ಬಳಿಕ ಅನುಭವ್ ತಾಯಿಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ 17 ಕೋಟಿ ರೂ. ಬೇಡಿಕೆ ಇಟ್ಟಿದ್ದ. ಆ ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಬಾಲಕನ ತಂದೆ ಬಿಜೋಯ್‍ಗೆ ವ್ಯಕ್ತಿ ವಾಟ್ಸಪ್ ಚಾಟ್ ಮಾಡುತ್ತಿದ್ದ. ಹಣದ ಬೇಡಿಕೆಯನ್ನು ಹತ್ತು ಕೋಟಿಗಿಳಿಸಿ, ಮಾಧ್ಯಮ ಮತ್ತು ಪೊಲೀಸ್ ದೂರಿನ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದ.
ವ್ಯಕ್ತಿ ಕರೆ ಮಾಡಿದ್ದ ಮೊಬೈಲ್ ನಂಬರ್ ಅನ್ನು ಪೊಲೀಸರು ಟ್ರೇಸ್ ಮಾಡಿದ್ದರು. ಮೊದಲು ಹಾಸನ, ಸಂಜೆ ಬೆಂಗಳೂರು ಭಾಗದ ನೆಟ್ವರ್ಕ್ ಲೊಕೇಶನ್‌ನಲ್ಲಿ ಆಕ್ಟೀವ್ ಆಗಿದ್ದನ್ನು ನೋಟ್ ಮಾಡಿದ್ದರು. ಶುಕ್ರವಾರ ರಾತ್ರಿ 9 ಗಂಟೆಯ ವೇಳೆ ಆ ನಂಬರ್‌ಗೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹಳ್ಳಿ ಎಂಬಲ್ಲಿಂದ ಕಾಲ್ ಹೋಗಿದ್ದನ್ನು ಟ್ರ್ಯಾಕ್ ಮಾಡಿದ ಪೊಲೀಸರು ಇಂದು ಬೆಳಗ್ಗಿನ ಜಾವ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
Kshetra Samachara
19/12/2020 10:01 pm