ಮಂಗಳೂರು: ಉಳ್ಳಾಲದ ಸಮುದ್ರದಲ್ಲಿ ಸೋಮವಾರ ಸಂಜೆ ಸಂಭವಿಸಿದ ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ತೀವ್ರ ರಕ್ಷಣಾ ಕಾರ್ಯಾಚರಣೆಯ ಬಳಿಕ ಪಾಂಡುರಂಗ ಸುವರ್ಣ(58) ಹಾಗೂ ಚಿಂತನ್ (21) ಎಂಬವರ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ. ಮೃತದೇಹವನ್ನು ಮಂಗಳೂರಿನ ದಕ್ಕೆಗೆ ಸಾಗಿಸಲಾಗಿದ್ದು, ಉಳಿದ ನಾಲ್ವರು ಮೀನುಗಾರರಾದ ಪ್ರೀತಂ (25), ಝಿಯಾವುಲ್ಲಾ (32), ಅನ್ಸಾರ್ (31) ಮತ್ತು ಹಸೈನಾರ್(25) ಎಂಬವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.
ಆಗಿದ್ದೇನು: ಬೋಳಾರದ ಪ್ರಶಾಂತ ಎಂಬವರ ಮಾಲಕತ್ವದ ಶ್ರೀರಕ್ಷಾ ಹೆಸರಿನ ಪರ್ಸಿನ್ ಬೋಟು ಸೋಮವಾರ ಸಂಜೆ 6:30ರ ಸುಮಾರಿಗೆ ಮುಳುಗಡೆಯಾಗಿತ್ತು. ಈ ವೇಳೆ ಅದರಲ್ಲಿದ್ದ 25 ಮೀನುಗಾರರ ಪೈಕಿ ಆರು ಮಂದಿ ನಾಪತ್ತೆಯಾಗಿದ್ದರು.
Kshetra Samachara
01/12/2020 04:31 pm