ಮಂಗಳೂರು: ರೌಡಿಶೀಟರ್ ಇಂದ್ರಜಿತ್ ಕೊಲೆ ಪ್ರಕರಣ ಸಂಬಂಧಿಸಿದಂತೆ 9 ಮಂದಿ ಕೊಲೆ ಆರೋಪಿಗಳನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೋಕ್ಷಿತ್(19),ಉಲ್ಲಾಸ್(20), ಆಶಿಕ್(23),ಗೌತಮ್(25),ಕೌಶಿಕ್(25),ನಿತಿನ್(25), ರಾಕೇಶ್(28), ಶರಣ್(32)ಜಗದೀಶ್(44) ಮತ್ತು ಶರಣ್ ಎನ್ನಲಾಗಿದೆ.
6 ವರ್ಷದ ಹಿಂದಿನ ಕೊಲೆ ಕೇಸ್ ರಿವೇಂಜ್ ಗೆ ಪ್ರೀಪ್ಲಾನ್ ಮರ್ಡರ್ ಮಾಡಿದ್ದಾರೆ. ಮೆಹಂದಿ ಕಾರ್ಯಕ್ರಮದ ಬಳಿಕ ಹಿಂದಿರುಗುತ್ತಿದ್ದ ಇಂದ್ರಜಿತ್ ನನ್ನು ಮೊದಲೇ ರೂಪಿಸಿದ್ದ ಯೋಜನೆಯಂತೆ ದುಷ್ಕರ್ಮಿಗಳು ಮಾರಕಾಯುಧಗಳಿಂದ 42 ಬಾರಿ ಚುಚ್ಚಿ ಕೊಂದು ಹಾಕಿದ್ದರು.
2014 ರಲ್ಲಿ ತಲ್ವಾರ್ ಜಗ್ಗನ ಮಗನ ಮರ್ಡರ್ ಕೇಸ್ ನಲ್ಲಿ ಇಂದ್ರಜಿತ್ ಭಾಗಿಯಾಗಿದ್ದ.
6 ವರ್ಷದ ಹಿಂದೆ ತಲ್ವಾರ್ ಜಗ್ಗನ ಮಗ ಸಂಜಯ್ ಹಾಗೂ ವರುಣ್ ಎಂಬಾತನನ್ನು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಹೊಯಿಗೆಬೈಲ್ ಸಮೀಪದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಇದರ ಪ್ರತೀಕಾರವಾಗಿ ಮಂಕಿಸ್ಟಾಂಡ್ ರೌಡಿ ಗ್ಯಾಂಗ್ ನ ಇಂದ್ರಜಿತ್ ನನ್ನು ಕೊಲೆ ಮಾಡಲಾಗಿದೆ.
Kshetra Samachara
28/11/2020 06:28 pm