ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲವ್ ಮಾಡಿ, ದೈಹಿಕ ಸಂಪರ್ಕ ಮಾಡಿ, ಮದುವೆ ಟೈಮಲ್ಲಿ ಕೈಕೊಟ್ಟ

ಉಡುಪಿ-13 ವರ್ಷಗಳಿಂದ ಪ್ರೀತಿಸಿದ್ದ ಯುವಕ ಮದುವೆಯ ದಿನ ಮಂಟಪಕ್ಕೆ ಬಾರದೆ ಕಾಣೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

13 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪರ್ಕಳದ ಗಣೇಶ್ ಎಂಬ ಯುವಕ ಮಮತಾ ಎಂಬ ಯುವತಿಯನ್ನು ವರಿಸಬೇಕಿತ್ತು. ಆದರೆ ಗಣೇಶ್ ಮದುವೆಯ ದಿನದಂದೆ ಮಂಟಪಕ್ಕೆ ಬಾರದೆ ಕಾಣೆಯಾಗಿದ್ದಾನೆ. ಮದುವೆ ಕಾರ್ಯವನ್ನು ರದ್ದುಗೊಳಿಸಿದ ಯುವತಿ ಮಾಮತಾ ಇದೀಗ ಗಣೇಶನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

ಗಣೇಶ್ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, 13 ವರ್ಷಗಳಿಂದಲೂ ಮದುವೆಯಾಗುವುದಾಗಿ ನಂಬಿಸಿದ್ದನಂತೆ.

ಇದರ ಪರಿಣಾಮವಾಗಿ, ಹುಡುಗಿ ಎರಡು ಬಾರಿ ಗರ್ಭಿಣಿಯಾಗಿದ್ದು, ಅದನ್ನು ಗಣೇಶ್ ಅಬಾರ್ಷನ್ ಮಾಡಿಸಿದ್ದಾನೆ. ಆದರೆ ಯುವತಿಯ ಒತ್ತಾಯದ ಮೇರೆಗೆ ಆತ ಮದುವೆಗೆ ಒಪ್ಪಿಕೊಂಡಿದ್ದ ಎನ್ನಲಾಗಿದೆ.

ನವೆಂಬರ್ 6 ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಗಣೇಶ್ ನವೆಂಬರ್ 4 ರಂದು ಇನ್ನೊಬ್ಬ ಹುಡುಗಿಯೊಂದಿಗೆ ಮದುವೆಯಾಗಲು ಸಿದ್ದತೆ ನಡೆಸಿಕೊಂಡಿದ್ದ. ಬಳಿಕ ಈ ವಿಷಯ ತಿಳಿದ ಮಮತ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರೊಂದಿಗೆ ನ. 6 ರಂದು ಮಮತಾ ಅವರನ್ನು ವಿವಾಹ ಆಗುವುದಾಗಿ ಒಪ್ಪಿಕೊಂಡಿದ್ದಾನೆ.

ನ. 6 ರಂದು ಯುವತಿ ಮದುವೆಗೆ ಸಿದ್ದತೆ ಮಾಡಿಕೊಂಡು ಮಂಟಪವನ್ನು ತಲುಪಿದಾಗ ವರ ಅಲ್ಲಿಂದ ನಾಪತ್ತೆಯಾಗಿದ್ದಾನೆ.

Edited By : Nagaraj Tulugeri
Kshetra Samachara

Kshetra Samachara

09/11/2020 04:05 pm

Cinque Terre

28.89 K

Cinque Terre

16

ಸಂಬಂಧಿತ ಸುದ್ದಿ