ಮಲ್ಪೆ: ಮಲ್ಪೆಯ ಮಂಜುಗಡ್ಡೆ ಘಟಕದಲ್ಲಿ ವಿದ್ಯುತ್ ಶಾಕ್ ಆಗಿ ಮಾಲಕ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಸುದೇಶ್ ಎಸ್‌ಕೆ (47) ಕರೆಂಟ್ ಶಾಕ್ ಗೆ ಒಳಗಾದವರು. ಇವರು ಮಂಜುಗಡ್ಡೆ ಘಟಕವನ್ನು ಲೀಸ್ ಆಧಾರದಲ್ಲಿ ನಡೆಸುತ್ತಿದ್ದು ಕರೆಂಟ್ ಇಲ್ಲ ಎಂದು ಟ್ರಾನ್ಸ್ ಫಾರ್ಮತ್ ಹತ್ತಿರ ನಿಂತಿದ್ದರು.
ಈ ವೇಳೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಆಪದ್ಭಾಂಧವ ಈಶ್ವರ್ ಮಲ್ಪೆಯವರೆಗೆ ಮಾಹಿತಿ ನೀಡಲಾಯಿತು. ಅಅವರು ಆಂಬುಲೆನ್ಸ್ ಗೆ ಫೋನ್ ಮಾಡಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಮಲ್ಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.
Kshetra Samachara
09/07/2022 03:42 pm