ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಂಟೈನರ್- ಕಾರು ಡಿಕ್ಕಿ; ಕಾರು ಚಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

ಮಂಗಳೂರು: ಕಾರು ಹಾಗೂ ಕಂಟೈನರ್ ಮುಖಾಮುಖಿ ಡಿಕ್ಕಿಯ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟು ಸಹ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಮುಂಜಾನೆ ನಗರ ಹೊರವಲಯದ ರಾ.ಹೆ.75ರ ಅಡ್ಯಾರ್ ಕಣ್ಣೂರು ಬಳಿ ಸಂಭವಿಸಿದೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಜತ್ತೂರು ನಿವಾಸಿ ಇಬ್ರಾಹೀಂ(32) ಮೃತಪಟ್ಟ ದುರ್ದೈವಿ. ಕಾರಿನಲ್ಲಿದ್ದ ಇನ್ನಿಬ್ಬರು ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ರಾಹಿಂ ಹಾಗೂ ಮತ್ತಿಬ್ವರು ಸವಾರರು ಕಾರಿನಲ್ಲಿ ಕುಂಜತ್ತೂರಿನಿಂದ ಬಂಟ್ವಾಳ ರಸ್ತೆಯ ಕಡೆಗೆ ಸಂಚರಿಸುತ್ತಿದ್ದರು. ಕಾರು ಡಿವೈಡರ್ ದಾಟುತ್ತಿದ್ದ ಸಂದರ್ಭ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಂಟೈನರ್ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕ ಇಬ್ರಾಹೀಂ ಸ್ಥಳದಲ್ಲೇ ಮೃತಪಟ್ಟಿದ್ದರೆ. ಮತ್ತೀರ್ವರು ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಹಿನ್ನೆಲೆಯಲ್ಲಿ ಚಾಲಕನಿಗೆ ಕಂಟೈನರ್ ಬರುತ್ತಿರುವುದು ಅರಿವಿಗೆ ಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

05/05/2022 12:39 pm

Cinque Terre

14.66 K

Cinque Terre

0

ಸಂಬಂಧಿತ ಸುದ್ದಿ