", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1737729894-WhatsApp-Image-2025-01-24-at-8.14.04-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ನಗರದ ಕಲ್ಸಂಕ ಜಂಕ್ಷನ್ ಸಮಸ್ಯೆ ತಿಂಗಳ ಬಳಿಕವೂ ಬಗೆಹರಿದಿಲ್ಲ. ವಾಹನಗಳ ದಟ್ಟಣೆಯನ್ನು ಗಮನಿಸಿಕೊಂಡು ಮತ್ತೆ ಹಿಂದಿನಂತೆಯೇ ಬದಲಾವಣೆಗಳನ...Read more" } ", "keywords": "Udupi, Kalsanka Junction Block, Traffic Congestion, Illogical Traffic Rules, Local Residents Protest, Udupi Traffic Woes, Karnataka Infrastructure, Road Safety, Traffic Management.,Mangalore,Crime", "url": "https://publicnext.com/article/nid/Udupi/Mangalore/Crime" }
ಉಡುಪಿ: ನಗರದ ಕಲ್ಸಂಕ ಜಂಕ್ಷನ್ ಸಮಸ್ಯೆ ತಿಂಗಳ ಬಳಿಕವೂ ಬಗೆಹರಿದಿಲ್ಲ. ವಾಹನಗಳ ದಟ್ಟಣೆಯನ್ನು ಗಮನಿಸಿಕೊಂಡು ಮತ್ತೆ ಹಿಂದಿನಂತೆಯೇ ಬದಲಾವಣೆಗಳನ್ನು ತರಲಾಗಿದೆ. ಗುಂಡಿಬೈಲಿನಿಂದ ಹಾಗೂ ಉಡುಪಿ ನಗರದಿಂದ ಶ್ರೀಕೃಷ್ಣ ಮಠಕ್ಕೆ ತೆರಳುವವರು ಕಡಿಯಾಳಿಯವರೆಗೆ ಹೋಗಿ ಯೂಟರ್ನ್ ಮಾಡಿ ಬರಬೇಕಿದೆ. ಕಲ್ಸಂಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಿ ನೇರವಾಗಿ ಶ್ರೀಕೃಷ್ಣ ಮಠಕ್ಕೆ ತೆರಳುವ ಮಾರ್ಗವನ್ನು ಬಂದ್ ಮಾಡಲಾಗಿದೆ.
ನಗರದೆಲ್ಲೆಡೆ ಅಳವಡಿಕೆ ಮಾಡಿರುವ ಫಲಕಗಳಲ್ಲಿ ಶ್ರೀಕೃಷ್ಣ ಮಠದ ರಸ್ತೆ ಎಂದು ನಮೂದಿಸಲಾಗಿದೆ. ಇದನ್ನೇ ಗಮನಿಸಿಕೊಂಡು ಬರುವ ಪ್ರವಾಸಿಗರು ಜಂಕ್ಷನ್‌ಗೆ ಬಂದು ಗೊಂದಲಕ್ಕೀಡಾಗುತ್ತಿದ್ದಾರೆ. ಕೆಲವು ಹೊತ್ತು ವಾಹನಗಳನ್ನು ರಸ್ತೆಯ ನಡುವೆಯೇ ನಿಲ್ಲಿಸುವ ಕಾರಣ ಮತ್ತೆ ಸಂಚಾರ ದಟ್ಟಣೆ ಕಂಡುಬರುತ್ತಿದೆ. ಬೆಳಗ್ಗೆ 9ರಿಂದ 1 ಗಂಟೆಯವರೆಗೆ ಒಬ್ಬರೇ ಪೊಲೀಸ್ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುವ ಕಾರಣ ವಾಹನಗಳನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ.
ವಾಹನಗಳ ದಟ್ಟಣೆ ಹೆಚ್ಚಿರುವಂತಹ ಸಂದರ್ಭದಲ್ಲಿ ಇಂತಹ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಗುತ್ತಿದೆ. ದಟ್ಟಣೆ ಇಲ್ಲದ ಸಂದರ್ಭದಲ್ಲಿ ವಾಹನಗಳು ಹಿಂದಿನಂತೆಯೇ ಸಂಚರಿಸಲು ಅನುವು ಮಾಡಿಕೊಡಲಾಗುವುದು ಎಂಬುದು ಜಿಲ್ಲಾಡಳಿತದ ಸ್ಪಷ್ಟನೆ. ಆದರೆ ತಿಂಗಳಿನಿಂದ ಟ್ರಾಫಿಕ್ ಸಮಸ್ಯೆ ಅನುಭವಿಸುತ್ತಿರುವ ಸಾರ್ವಜನಿಕರು ಹೋರಾಟಕ್ಕೆ ಸಜ್ಜಾಗಿದ್ದಾರೆ.
PublicNext
24/01/2025 08:15 pm