", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1737727239-WhatsApp-Image-2025-01-24-at-7.30.31-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು : ಕರಾವಳಿಯಲ್ಲಿ ರೌಡಿಸಂ, ಭೂಗತಲೋಕ ಕೊಂಚ ಕಾಲ ತಣ್ಣಗಿತ್ತು. ಆದರೆ ಇದೀಗ ಮತ್ತೊಮ್ಮೆ ಪಾತಕಲೋಕ ಚಿಗುರೊಡೆವ ಮುನ್ಸೂಚನೆಯ ಗಾಳಿ ಬೀಸಿದೆ....Read more" } ", "keywords": "Mangaluru, Murderers on the Loose, Coastal Karnataka, Crime Wave, Reels, Social Media, Karnataka Crime News, Mangalore Police, Coastal Security, Rising Crime Rate.,Udupi,Mangalore,Crime", "url": "https://publicnext.com/article/nid/Udupi/Mangalore/Crime" }
ಮಂಗಳೂರು : ಕರಾವಳಿಯಲ್ಲಿ ರೌಡಿಸಂ, ಭೂಗತಲೋಕ ಕೊಂಚ ಕಾಲ ತಣ್ಣಗಿತ್ತು. ಆದರೆ ಇದೀಗ ಮತ್ತೊಮ್ಮೆ ಪಾತಕಲೋಕ ಚಿಗುರೊಡೆವ ಮುನ್ಸೂಚನೆಯ ಗಾಳಿ ಬೀಸಿದೆ. ಕೊಲೆಪಾತಕಿಗಳನ್ನು ವಿಜೃಂಭಿಸಿ ರೀಲ್ಸ್ ಮಾಡಲಾಗುತ್ತಿದ್ದು, ಇನ್ಸ್ಟಾಗ್ರಾಂನಲ್ಲಿ ಕೊಲೆಗಡುಕರ ಹವಾ ಕ್ರಿಯೇಟ್ ಆಗುತ್ತಿದೆ.
ಕಾಟಿಪಳ್ಳ ದೀಪಕ್ ರಾವ್ ಕೊಲೆ ಆರೋಪಿ ಮುಲ್ಕಿ ನೌಶಾದ್ ಹಾಗೂ ಸುರತ್ಕಲ್ ಫಾಝೀಲ್ ಕೊಲೆ ಆರೋಪಿ ಸುಭಾಶ್ ಬಜ್ಪೆಯನ್ನು ರೀಲ್ಸ್‌ಗಳಲ್ಲಿ ಹೀರೋಗಳ ರೀತಿ ಹೈಪ್ ಕೊಡಲಾಗುತ್ತಿದೆ.
ಕೊಲೆ, ಗಲಭೆ ಸೇರಿದಂತೆ ಪೊಕ್ಸೊ ಪ್ರಕರಣದ ಆರೋಪಿ ಮುಲ್ಕಿ ನೌಶಾದ್ ಸದ್ಯ ದೀಪಕ್ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆಹೊರಗಿದ್ದಾನೆ. ಈತನ ರೌಡಿಸಂ ಫೋಟೊ, ಜೈಲಿನಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋ, ಅರೆಸ್ಟ್ ಆದ ಸುದ್ದಿಗಳನ್ನೇ ಬಳಸಿ ರೀಲ್ಸ್ ಮಾಡಿ ರೀಲ್ಸ್ ಮಾಡಲಾಗಿದೆ. ಅದೇ ರೀತಿ ನೌಶಾದ್‌ನನ್ನು 'ಬಿಯರ್ಡ್ ಕಿಂಗ್' ಎಂದು ವಿಜೃಂಭಿಸಲಾಗಿದೆ.
ಇನ್ನು ಫಾಝೀಲ್ ಕೊಲೆ ಆರೋಪಿ ಸುಹಾಸ್ ಬಜ್ಪೆಯನ್ನೂ 'ಎಸ್ ಭಾಯ್' ಎಂದು ರೀಲ್ಸ್‌ಗಳಲ್ಲಿ ಹವಾ ಸೃಷ್ಟಿಸಲಾಗುತ್ತಿದೆ. ಜೊತೆಗೆ ಚೋನಿ ಸೋಮೇಶ್ವರ, ಖಲೀಲ್ ಕಲ್ಲಡ್ಕ, ತನ್ನು ಸೇರಿದಂತೆ ಹಲವು ಪಾತಕಿಗಳ ಫೋಟೋಗಳನ್ನು ಇಟ್ಟು ರೀಲ್ಸ್ ಮಾಡಿ ರೌಡಿಗಳನ್ನು ಹೀರೋಗಳ ಹೈಪ್ ಕೊಡಲಾಗುತ್ತಿದೆ. ಪೊಲೀಸ್, ಕಾನೂನು ಭಯವಿಲ್ಲದೆ ರೀಲ್ಸ್‌ಗಳಲ್ಲಿ ರೌಡಿಗಳ ಬೆಂಬಲಿಗರು ಹವಾ ಎಬ್ಬಿಸುತ್ತಿರುವುದು ಮಂಗಳೂರಿನಲ್ಲಿ ಮತ್ತೆ ಪಾತಕಲೋಕ ಚಿಗುರೊಡೆಯುತ್ತಿರುವ ಲಕ್ಷಣ ಗೋಚರಿಸುತ್ತಿದೆ.
ಈ ಬೆಳವಣಿಗೆ ಕೋಮುಸಂಘರ್ಷಕ್ಕೆ ಎಡೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಪೊಲೀಸ್ ಇಲಾಖೆ ಇತ್ತ ದೃಷ್ಟಿ ಹಾಯಿಸಬೇಕಾಗಿದೆ.
PublicNext
24/01/2025 07:31 pm