ಕುಂದಾಪುರ: "ಯುವರತ್ನ" ನಿಗೆ ಕುಂದಾಪುರದ ಡಾ. ರಾಜ್ ಅಭಿಮಾನಿ ಸಂಘಟನೆ ವತಿಯಿಂದ ದೀಪಗಳನ್ನು ಬೆಳಗಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಹೊಸ ಬಸ್ ನಿಲ್ದಾಣ ಬಳಿ ಜರುಗಿದ ಕಾರ್ಯಕ್ರಮದಲ್ಲಿ ಸಂಘಟನೆ ಅಧ್ಯಕ್ಷ ರತ್ನಾಕರ ಪೂಜಾರಿ ದೀಪ ಬೆಳಗಿಸಿ ಚಾಲನೆ ನೀಡಿದರು. "ಅಪ್ಪು ಅವರ ಹಠಾತ್ ನಿರ್ಗಮನದಿಂದ ಒಡ ಹುಟ್ಟಿದ ಸಹೋದರನನ್ನೇ ಕಳೆದು ಕೊಂಡಂತಹ ಶೂನ್ಯ ಭಾವ ಆವರಿಸಿದೆ. ಇಂತಹ ಹೃದಯವಂತ, ಮಾನವೀಯ ಚೇತನ ಮರೆಯಾಗಿದ್ದು, ಆ ನೋವನ್ನು ವ್ಯಕ್ತಪಡಿಸಲು ಯಾವ ಪದಗಳಿಂದಲೂ ಅಸಾಧ್ಯ" ಎಂದು ಪುನೀತ್ ಅಭಿಮಾನಿಗಳು ಕಂಬನಿ ಮಿಡಿದರು. ಈ ವೇಳೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಕೂಡ ದೀಪವನ್ನು ಹಿಡಿದು ಶ್ರದ್ಧಾಂಜಲಿ ಅರ್ಪಿಸಿದರು.
ಮಾಜಿ ರಾಜ್ಯ ಕಬಡ್ಡಿ ಆಟಗಾರ ತನ್ವೀರ್ ಕುಂದಾಪುರ, ಸುನಿಲ್ ಖಾರ್ವಿ ತಲ್ಲೂರು, ಶ್ರೀಧರ್ ಗಾಣಿಗ, ಪ್ರಭಾಕರ್ ಖಾರ್ವಿ ಅಗಸ್ಟಿನ್ ಡಿಸೋಜ, ಮಝರ್ ಕುಂದಾಪುರ, ಸಂತೋಷ್ ಕುಂದೇಶ್ವರ, ಗಾಳಿ ಮಾಧವ ಖಾರ್ವಿ, ಡುಂಡಿರಾಜ್ , ಕಿಶನ್ ಖಾರ್ವಿ, ನವೀನ್ ಕುಮಾರ್ , ನಾರಾಯಣ ಗಾಣಿಗ, ನಾಗರಾಜ್ ಖಾರ್ವಿ, ಸೂರ್ಯ ದೇವಾಡಿಗ,ಶಿವರಾಜ್ ಖಾರ್ವಿ, ಗುರು ಖಾರ್ವಿ, ಪ್ರಸಾದ್ ಗಾಣಿಗ ಕೋಡಿ ಮುಂತಾದವರು ಭಾಗವಹಿಸಿ, ನುಡಿನಮನ ಸಲ್ಲಿಸಿದರು.
Kshetra Samachara
03/11/2021 07:44 am