ಉಡುಪಿ: ನಿರ್ದೇಶಕ ಸಂತೋಷ್ ಕೊಡಂಕೇರಿ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ, ಹೊಸದೊಂದು ನೈಜ ಕಥೆಯನ್ನು ಆಧಾರವಾಗಿಟ್ಟುಕೊಂಡು ಹೊಸ ಸಂಚಲನ ಮೂಡಿಸಲು ರೆಡಿಯಾಗುತ್ತಿದ್ದಾರೆ.
ಕರ್ನಾಟಕ-ಕೇರಳ ತೆಲಂಗಾಣ ಈಶಾನ್ಯ ಭಾರತ ಸಾಕಷ್ಟು ಕಡೆಗಳಲ್ಲಿ 130ಕ್ಕೂ ಹೆಚ್ಚಿನ ತೂಗು ಸೇತುವೆ ನಿರ್ಮಾಣ ಮಾಡಿರುವ ಸುಳ್ಯದ ಕನ್ನಡಿಗ ಗಿರೀಶ್ ಭಾರದ್ವಾಜ್ ಅವರ ಬದುಕಿನ ಕಥನವನ್ನು ಸಂತೋಷ್ ಕೊಡಂಕೇರಿ ನಿರ್ದೇಶನ ಮಾಡುತ್ತಿದ್ದಾರೆ.
ಈ ಸಿನಿಮಾದ ಪೋಸ್ಟರ್ ಹಾಗೂ ಗ್ರಾಫಿಕ್ಸ್ ಟೀಸರ್ ಎಲ್ಲರನ್ನು ಆಕರ್ಷಣೆ ಮಾಡಿದೆ. ಗಿರೀಶ್ ಭಾರದ್ವಾಜ್ ಮೂಲತಃ ಮೆಕ್ಯಾನಿಕ್ ಇಂಜಿನಿಯರ್ ಆಗಿದ್ದ ತಮ್ಮ ಜೀವನದ ಒಂದು ಆಕಸ್ಮಿಕ ಘಟನೆಯಿಂದಾಗಿ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು, ಈ ಬ್ರಿಡ್ಜ್ ಮಾಡಲು ತೊಡಗಿಕೊಂಡ ಭಾರತ್ ಧ್ವಜ ರೋಚಕ ಕಥನವನ್ನು ಇದೀಗ ತೆರೆಮೇಲೆ ತರಲು ಸಂತೋಷ್ ಕೊಡಂಕೇರಿ ರೆಡಿಯಾಗಿದ್ದಾರೆ.
ಒಬ್ಬ ಕನ್ನಡಿಗನ ಸಾಧನೆಯನ್ನು ಬಯೋಪಿಕ್ ಮೂಲಕ ಹಿಂದಿ ಮತ್ತು ಕನ್ನಡದಲ್ಲಿ ಸಿನಿಮಾ ಮಾಡಲು ಹೊರಟ ಚಿತ್ರತಂಡ ಹೊಸ ರೀತಿಯ ಹೊಸ ಕಲ್ಪನೆಯನ್ನು ಒಳಗೊಂಡಂತೆ ಸಿನಿಮಾಕ್ಕೆ ಹೊಸ ರೂಪ ಕೊಡಲು ಸಜ್ಜಾಗಿದೆ.ಸದಾ ಶಾಂತ ಸ್ವರೂಪದಲ್ಲಿರುವ ಕ್ರಿಯೇಟಿವ್ ನಿರ್ಮಾಪಕ ಶಾಂತಕುಮಾರ್ ಕನ್ನಡ ಚಿತ್ರರಂಗಕ್ಕೆ ಹೊಸಬರಲ್ಲ ಈಗಾಗಲೇ ಎರಡು ಮೂರು ಸಿನಿಮಾಗಳನ್ನು ಮಾಡಿ ಹೊಸ ಪ್ರತಿಭೆಗಳಿಗೆ ಅವಕಾಶ ಒದಗಿಸಿ ಕೊಟ್ಟಂತಹ ಕಲಾರಾಧಕ, ಭಾಸ್ಕರ್ ರೋಡ್ ಲೈನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದ ಶಾಂತಕುಮಾರ್ ಇದೀಗ ಹಿಂದಿಯಲ್ಲೂ ಕೂಡ ಒಬ್ಬ ಕನ್ನಡಿಗನ ಪ್ರತಿಭೆ ಹೇಳಬೇಕು ಎಂದು ಈ ಸಿನಿಮಾದ ಮೂಲಕ ಮುಂದಾಗಿದ್ದಾರೆ, ದಿ ಬ್ರಿಡ್ಜ್ ಮ್ಯಾನ್ಗೆ ಬಂಡವಾಳ ಹಾಕಿ ಸಂತೋಷ್ ಕೊಡಂಕೇರಿಗೆ ಸಾತ್ ಕೊಟ್ಟಿದ್ದಾರೆ.
ಸಹ ನಿರ್ಮಾಪಕರಾಗಿ ಹರಿನಾಥ್ ಎಲ್ ಮುಂದೆ ಬಂದಿದ್ದಾರೆ. ಇದೊಂದು ಚಿತ್ರರಂಗದಲ್ಲಿ ಬಯೋಪಿಕ್ ಯುಗವಾಗಿದೆ ಅನೇಕ ಸಾಹಸಿಗರ ಸಿನಿಮಾಗಳು ಎಗ್ಗಿಲ್ಲದೆ ಬರುತ್ತಿದೆ, ಆದರೆ ಇದೀಗ ಕನ್ನಡಿಗನೊಬ್ಬನ ಸಾಧನೆಯನ್ನು ದೇಶವ್ಯಾಪ್ತಿ ಪಸರಿಸಲು ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ ಕೊಡಂಕೇರಿ.
ಕೈಗೆತ್ತಿಕೊಂಡ ಪ್ರಾಜೆಕ್ಟ್ ಭಿನ್ನವಾಗಿ ತರುವುದೊಂದೇ ಇವರಿಗೆ ಗೊತ್ತಿರುವ ಭಿನ್ನ ಆಲೋಚನೆ, ಕೆಲಸದಲ್ಲಿ ನೋ ಕಾಂಪ್ರಮೈಸ ವರ್ಷದ 365 ದಿನ ಸಿನಿಮಾ ಸಿನಿಮಾ ಸಿನಿಮಾ ಇವರ ಮೂಲಮಂತ್ರ ಇದೀಗ ದಿ ಬಿಡ್ಜ್ ಮ್ಯಾನ್ ಜನವರಿಯಿಂದ ಚಿತ್ರೀಕರಣಕ್ಕೆ ಸಜ್ಜಾಗಲಿದೆ ಇನ್ನಷ್ಟು ಪಾತ್ರ ವರ್ಗದವರನ್ನು ಚಿತ್ರತಂಡ ಬಯಲು ಮಾಡಬೇಕಾಗಿದೆ ,ನಮ್ಮ ಕಡೆಯಿಂದ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್.
Kshetra Samachara
25/12/2020 02:15 pm