ಉಡುಪಿ: ಹಣ್ಣುಗಳ ರಾಜ ಮಾವು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆದ್ರೆ, ಕರಾವಳಿಯಲ್ಲಿ ಮಾವನ್ನು ಬೆಳೆಯೋದು ಕಡಿಮೆ. ಹೀಗಾಗಿ ಕರಾವಳಿಗರಿಗೂ ವಿವಿಧ ತಳಿಯ ಮಾವು ಸವಿಯುವ ಅವಕಾಶ ಕಲ್ಪಿಸಿದೆ "ಮಾವು ಮೇಳ".
ಇದೇ ಮೊದಲ ಬಾರಿಗೆ ಉಡುಪಿಯ ದೊಡ್ಡಣಗುಡ್ಡೆಯಲ್ಲಿ ನಡೆದ ಮಾವು ಮೇಳದ ಝುಲಕ್ ಇಲ್ಲಿದೆ...
ರಸಪುರಿ, ಬಾದಾಮಿ, ಸಕ್ಕರೆ ಗುತ್ತಿ, ತೋತಾಪುರಿ, ಸಿಂದೂರ, ರತ್ನಾಗಿರಿ ಆಲ್ಪೋನ್ಸ್ ಹೀಗೆ ವಿವಿಧ ತಳಿಗೆ ಸೇರಿದ ಸುಮಾರು 30 ಟನ್ ಮಾವು ಕಣ್ಮನ ಸೆಳೆಯುತ್ತಿದೆ. ತಮ್ಮಿಷ್ಟದ ಮಾವಿನ ಹಣ್ಣು ಖರೀದಿಯಲ್ಲಿ ಫುಲ್ ಬ್ಯುಸಿಯಾಗಿದ್ದರು ಮಾವು ಪ್ರಿಯರು.
ಕರಾವಳಿಯಲ್ಲಿ ಹಣ್ಣಿನ ಬೆಳೆ ಕಡಿಮೆ. ಮಾವನ್ನು ವ್ಯಾಪಾರದ ದೃಷ್ಟಿಯಿಂದ ಬೆಳೆಯೋದು ಅಪರೂಪ. ಹೀಗಾಗಿ ಕರಾವಳಿಯಲ್ಲಿ ಸಿಗದ ಮಾವನ್ನು ಮಾವಿನ ಮೇಳದಲ್ಲಿ ಖರೀದಿ ಮಾಡಿ ಮಾವು ಪ್ರಿಯರು ಸಂತಸಗೊಂಡರು. ವಿವಿಧ ತಳಿಯ ಮಾವಿನ ಹಣ್ಣು ಖರೀದಿಸಿ, ಮೇಳವನ್ನು ಉತ್ತೇಜಿಸಿದರು.
ಈ ವರ್ಷ ಮಳೆಯಿಂದ ಶೇ. 30ರಷ್ಟು ಮಾವಿನ ಬೆಳೆ ನಷ್ಟವಾಗಿದೆ. ಹೀಗಾಗಿ ಇಂತಹ ಮಾವಿನ ಮೇಳ ರೈತರಿಗೆ ವರದಾನ, ವರಮಾನ. ಜೊತೆಗೆ ಮಾವು ಪ್ರಿಯರಿಗೂ ಖುಷಿ ತಂದಿದೆ.
PublicNext
29/05/2022 09:31 am