ಕಾರ್ಕಳ: ಅಜೆಕಾರು ಸಹಕಾರಿ ವ್ಯವಸಾಯನಿಕ ಸಂಘದ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 19ರಂದು ಸೋಮವಾರ ಅಜೆಕಾರು ರಾಮಮಂದಿರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಭವಾನಿ ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, 2021 22 ನೇ ಸಾಲಿನಲ್ಲಿ ಸಂಘವು 137.01 ಕೋಟಿ ರೂ ವ್ಯವಹಾರ ನಡೆಸಿದ್ದು 53 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದರು.
ಸಂಘದಲ್ಲಿ 3156 ಏ ತರಗತಿಯ ಸದಸ್ಯರಿದ್ದು ಸಂಘದ ಸದಸ್ಯರಿಂದ 14.22 ಲಕ್ಷ ಪಾಲು ಬಂಡವಾಳ ಸಂಗ್ರಹಿಸಿ 7.89 ಲಕ್ಷ ಮರುಪಾವತಿಸಿ ವರ್ಷಾಂತ್ಯಕ್ಕೆ ಸಂಘವು 1. 63 ಕೋಟಿ ಪಾಲು ಬಂಡವಾಳ ಹೊಂದಿದೆ ಎಂದರು. ಸಂಘವು ಪ್ರಸಕ್ತ ವರ್ಷದಲ್ಲಿ 56.49 ಕೋಟಿ ಠೇವಣಿ ಸಂಗ್ರಹಿಸಿ 54.88 ಕೋ.ರೂ ಮರುಪಾವತಿಸಿ ವರ್ಷಾಂತಿಕ್ಕೆ ಸಂಘದಲ್ಲಿ 19.28 ಕೋಟಿ ರೂ ಠೇವಣಿ ಜಮೆಯಾಗಿದೆ. ಈ ಮೂಲಕ ಠೇವಣಿ ಸಂಗ್ರಹಣೆಯಲ್ಲಿ 9.11% ಪ್ರಗತಿಯಾಗಿದೆ ಎಂದರು.
ಈ ಸಾಲಿನಲ್ಲಿ ಸದಸ್ಯರಿಗೆ 10% ಡಿವಿಡೆಂಡ್ ನೀಡಲಾಗುವುದು ಎಂದರು. ಇದಲ್ಲದೇ ಶಿರ್ಲಾಲಿನಲ್ಲಿ ಸಂಘದ ಕಟ್ಟಡಕ್ಕೆ ನಿವೇಶನ ಖರೀದಿಸಿದ್ದು ಇನ್ನು ಮುಂದೆ ಆ ಭಾಗದ ರೈತರು ಅಲ್ಲಿಯೇ ವ್ಯವಹಾರ ವಹಿವಾಟುಗಳನ್ನು ನಡೆಸಲು ಅನುಕೂಲವಾಗಲಿದೆ ಎಂದರು.
ಸಂಘದ ಸಭೆಯಲ್ಲಿ ಸದಸ್ಯತನ ಹೊಂದಿರುವ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡಬೇಕೆಂದು ರೈತರು ಆಗ್ರಹಿಸಿದರು.
ರೈತರ ಪರವಾಗಿ ಕೃಷ್ಣ ಎಂ ನಾಯ್ಕ್,ನಂದಕುಮಾರ್ ಹೆಗ್ಡೆ, ಶ್ಯಾಮ ನಾಯ್ಕ್, ಶ್ರೀನಿವಾಸ ನಾಯಕ್ ಶಿರ್ಲಾಲು ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅರುಣ್ ಹೆಗ್ಡೆ, ನಿರ್ದೇಶಕರಾದ ಶಾಂತಿರಾಜ್ ಜೈನ್, ಪ್ರಶಾಂತ್ ಶೆಟ್ಟಿ, ಲಕ್ಷ್ಮಣ್ ವಾಗ್ಳೆ, ಸತೀಶ್ ಪೂಜಾರಿ ಮುಳ್ಕಾಡು, ಶಂಕರ್ ಶೆಟ್ಟಿ, ರಾಕೇಶ್ ನಾಯ್ಕ್, ರಾಘವೇಂದ್ರ, ಜಲಜ ಶೆಟ್ಟಿ ವಿಜೇತಾ ಪೈ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಬಿ ವಿ ಅವರು, ತೆಂಗು ಮರ ಏರುವವರಿಗೆ ವಿಮಾ ಸೌಲಭ್ಯ ಹಾಗೂ ಫಸಲ್ ಭೀಮಾ ಯೋಜನೆಯ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಿದರು ಸಂಘದ ಕಾರ್ಯನಿರ್ವನಾಧಿಕಾರಿ ರಮತಾ ಶೆಟ್ಟಿ, ವಾರ್ಷಿಕ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು. ಪ್ರಶಾಂತ್ ಶೆಟ್ಟಿ ಸ್ವಾಗತಿಸಿ ಅರುಣ್ ಹೆಗ್ಡೆ ವಂದಿಸಿದರು
Kshetra Samachara
19/09/2022 04:16 pm