ಸುಳ್ಯ: ಎಸ್.ಅಂಗಾರ ಅತ್ಯಾಧುನಿಕ ರೀತಿಯ ಸಂಸ್ಕರಣಾ ಘಟಕ ನಿರ್ಮಾಣ: ಚಂದ್ರ ಕೋಲ್ಚಾರ್ ದ.ಕ.ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಪಿ.ಡಬ್ಲ್ಯುಡಿ ಐಬಿ ಬಳಿಯ ನಿವೇಶನದಲ್ಲಿ ಶಿಲಾ ನ್ಯಾ ಕಾರ್ಯಕ್ರಮವು ಎ.25 ರಂದು ನಡೆಯಿತು.
ಬಂದರು, ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ಶಿಲಾನ್ಯಾಸ ನೆರವೇರಿಸಿ ಜೇನು ಸೊಸೈಟಿಯ ನೂತನ ಕಟ್ಟಡವು ಶೀಘ್ರವಾಗಿ ನಿರ್ಮಾಣವಾಗಿ ಜೇನು ಕೃಷಿಕರಿಗೆ ಪ್ರಯೋಜನವಾಗಲಿ ಎಂದು ಹೇಳಿದರು.
ಉತ್ತಮ ದರ್ಜೆಯ ಜೇನನ್ನು ಗ್ರಾಹಕರಿಗೆ ಪೂರೈಸುವ ಮುಖಾಂತರ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು. ದ.ಕ.ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ 12 ಸೆಂಟ್ಸ್ ನಿವೇಶನದಲ್ಲಿ ಪ್ರಥಮ ಹಂತದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತದೆ. ಬಳಿಕ 1.5 ಕೋಟಿಯ ಬಿಲ್ಡಿಂಗ್ ನಿರ್ಮಾಣ ಮಾಡುತ್ತೇವೆ. ಇದರಲ್ಲಿ ಅತ್ಯಾಧುನಿಕ ರೀತಿಯಲ್ಲಿ ಸಂಸ್ಕರಣಾ ಘಟಕ, ಲ್ಯಾಬ್ ,ಜೇನು ಕೃಷಿಕರಿಗೆ ತರಬೇತಿ ಕೇಂದ್ರ ,ಪ್ರೊಸೆಸಿಂಗ್ ಸೆಂಟರ್ ನ್ನು ಪ್ರಾರಂಭಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ , ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ, ಬುದ್ದ ನಾಯ್ಕ,
ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನಿರ್ದೇಶಕರಾದ ಪಾಂಡುರಂಗ ಹೆಗ್ಡೆ, ಮನಮೋಹನ ಆರಂಭ್ಯ, ಪುಟ್ಟಣ್ಣ ಗೌಡ ಕಾಡುತೋಟ,ಗೋವಿಂದ ಭಟ್ ಪುತ್ತೂರು, ಶ್ರೀಮತಿ ಸುಶೀಲ ಸೋಣಂಗೇರಿ, ಜನಾರ್ಧನ ಚೂಂತಾರು, ಸಂಘದ ವ್ಯವಸ್ಥಾಪಕ ನಿರ್ದೇಶಕ ತಿಮ್ಮಯ್ಯ ಗೌಡ ಪಿಂಡಿಮನೆ, ಸುಳ್ಯ ಶಾಖಾ ವ್ಯವಸ್ಥಾಪಕರಾದ ಚೈತ್ರಾ, ಎಫ್.ಪಿ.ಒ ಅಧ್ಯಕ್ಷ ವೀರಪ್ಪ ಗೌಡ, ಇಂಜಿನಿಯರ್ ಪ್ರಶಾಂತ್, ಕಾಂಟ್ರಾಕ್ಟರ್ ಯತೀಶ್ , ಶಿಕ್ಷಕ ಸುಂದರ ಕೇನಾಜೆ, ಕೇಶವ ಬಂಗ್ಲೆಗುಡ್ಡೆ, ರವಿಪ್ರಕಾಶ್, ಲೋಕೇಶ,ಪುನಿತ್,ಪ್ರಸಾದ್ ಹಾಗು ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗು ಇತರ ಗಣ್ಯರು ಉಪಸ್ಥಿತರಿದ್ದರು. ತಿಮ್ಮಯ್ಯ ಗೌಡ ಪಿಂಡಿಮನೆ ವಂದಿಸಿದರು. ಪುರೋಹಿತ ಶಿವಪ್ರಸಾದ್ ಪೂಜಾಕಾರ್ಯ ನೆರವೇರಿಸಿದರು.
Kshetra Samachara
25/04/2022 10:31 pm