ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ನಾಡು: ಸಸ್ಯಾಹಾರದಿಂದ ಆರೋಗ್ಯ ರಕ್ಷಣೆ;ಶಿವಪ್ರಸಾದ್ ಓರ್ಮುಡಿ

ಕೊಲ್ನಾಡು: ಕೃಷಿ ಮೇಳದ ಎರಡನೇ ದಿನವಾದ ಶನಿವಾರ ನಡೆದ ಎರಡನೇ ವಿಚಾರಗೋಷ್ಠಿಯಲ್ಲಿ "ಕಾಲಮಾನ ಆಧಾರಿತ ಕೃಷಿ" ವಿಚಾರದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಪ್ರಗತಿಪರ ಕೃಷಿಕ ಶಿವಪ್ರಸಾದ್ ಓರ್ಮುಡಿ ಪಾಲ್ಗೊಂಡು ಮಾತಾಡಿದರು.

"ಆನೆ, ಬೆಕ್ಕು, ಹುಲಿಗಳ ಕಣ್ಣು ನೇರವಾಗಿಲ್ಲ ಮುಖದ ಬದಿಯಲ್ಲಿರುತ್ತೆ. ಮನುಷ್ಯನ ಕಣ್ಣು ನೇರವಾಗಿರುತ್ತೆ. ಮನುಷ್ಯ ಕಿವಿಯನ್ನು ತಾನಾಗೇ ಅಲ್ಲಾಡಿಸಲು ಆಗುವುದಿಲ್ಲ. ಆದರೆ ಪ್ರಾಣಿಗಳಿಗೆ ಅದು ಸಾಧ್ಯವಿದೆ. ಸಸ್ಯಾಹಾರಿಯ ಕರುಳು ತುಂಬಾ ಉದ್ದ, ಮಾಂಸಾಹಾರಿಯ ಕರುಳು ಸಣ್ಣದು. ಈ ಮೂಲಕ ಒಂದು ಪ್ರಾಣಿಯ ತಲೆ ಮಾತ್ರ ಸಿಕ್ಕಿದರೂ ಅದು ಸಸ್ಯಾಹಾರಿಯೋ ಅಥವಾ ಮಾಂಸಾಹಾರಿಯೋ ಎಂದು ಗುರುತಿಸಬಹುದು.

ಈ ಎಲ್ಲಾ ಕಾರಣಗಳಿಂದ ಮನುಷ್ಯ ಮೂಲತಃ ಸಸ್ಯಾಹಾರಿಯೇ ಎನ್ನುವುದು ದೃಢಪಡುತ್ತದೆ. ಮನುಷ್ಯ ಸಸ್ಯಾಹಾರ, ನಾರು ಪದಾರ್ಥ ಯಾಕೆ ಸೇವಿಸಬೇಕು ಎಂದರೆ ಅದು ಕೆಟ್ಟ ಕೊಲೆಸ್ಟ್ರಾಲ್ ದೂರ ಮಾಡುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ತರಕಾರಿ ಬೆಳೆಸಲು ವಿಷಕಾರಿ ಕ್ರಿಮಿನಾಶಕ ಬಳಸುವ ಕಾರಣ ಅರೋಗ್ಯ ಹಾಳಾಗುತ್ತದೆ.

ಇದರ ಬದಲು 365 ದಿನಗಳಲ್ಲೂ ಮನೆಯಲ್ಲಿ ನಾವೇ ಬೆಳೆಸಿದ ತರಕಾರಿ, ಹಣ್ಣು ಸೇವಿಸುವ ಕಾರಣ ನಾವು, ನಮ್ಮ ಸಮಾಜ, ದೇಶ ಎಲ್ಲವೂ ಆರೋಗ್ಯಪೂರ್ಣವಾಗಿರಬಹುದು. ಏಕಾದಶಿ, ದ್ವಾದಶಿ, ಅಮವಾಸ್ಯೆ, ಹುಣ್ಣಿಮೆ ಹೀಗೆ ಶನಿವಾರ ಆಯ್ಕೆ ಮಾಡಿ ತರಕಾರಿ ಬೀಜ ಬಿತ್ತನೆ ಮಾಡಿದರೆ ಯಶಸ್ಸು ಸಿಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ರೈತರು ವೈವಿಧ್ಯಮಯ ತರಕಾರಿ ಬೆಳೆಸುವುದಿಲ್ಲ. ಒಂದೇ ಬೆಳೆಗೆ ಒಗ್ಗಿಕೊಳ್ಳುವ ಬದಲು ಕೃಷಿಯಲ್ಲಿ ವೈವಿಧ್ಯ ಕಾಪಾಡಿಕೊಂಡರೆ ಲಾಭ ಗಳಿಸಬಹುದು." ಎಂದರು.

ಸಾವಯವ ಕೃಷಿಕರ ಗ್ರಾಹಕರ ಬಳಗದ ಶರತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿನೋದ್ ಸಾಲಿಯಾನ್ ಬೆಳ್ಳಾಯರು, ಉಮೇಶ್ ಪೂಜಾರಿ, ನಮಿತಾ ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

12/03/2022 02:40 pm

Cinque Terre

2.42 K

Cinque Terre

0

ಸಂಬಂಧಿತ ಸುದ್ದಿ