ವಿಶೇಷ ವರದಿ: ರಹೀಂ ಉಜಿರೆ
ಅಜೆಕಾರು: ಕರಾವಳಿ ಕಂಗು- ತೆಂಗುಗಳಿಂದ ಕಂಗೊಳಿಸುವ ಊರು. ಇತರ ಕೃಷಿ ಬಗ್ಗೆ ಇಲ್ಲಿನ ರೈತರಿಗೆ ಒಲವು ಅಷ್ಟಕಷ್ಟೇ.
ಆದರೆ, ಇತ್ತೀಚಿನ ವರ್ಷಗಳಲ್ಲಿ ನಿಂಬೆ ಕೃಷಿ ಬಗ್ಗೆ ರೈತರು ಆಸಕ್ತಿ ತೋರುತ್ತಿದ್ದಾರೆ. ಎಕರೆಗಟ್ಟಲೆ ಭೂಮಿಯಲ್ಲಿ ನಿಂಬೆ ಕೃಷಿ ಮಾಡಿ, ಉತ್ತಮ ಲಾಭವನ್ನೂ ಗಳಿಸುತ್ತಿದ್ದಾರೆ.
ಉಡುಪಿ ಜಿಲ್ಲೆ ಅಜೆಕಾರಿನ, ಖಾಸಗಿ ಕಂಪನಿ ಉದ್ಯೋಗಿ ಆಗಿದ್ದ ನಾರಾಯಣ ನಾಯ್ಕ್ ಎಂಬವರು, ಸದ್ಯ ನಿವೃತ್ತ ಜೀವನದಲ್ಲಿ ದೊಡ್ಡ ಪ್ರಮಾಣದಲ್ಲಿ ನಿಂಬೆ ಕೃಷಿಯಲ್ಲಿ ತೊಡಗಿದ್ದಾರೆ. ಜೊತೆಗೆ ತಮ್ಮ ಸದಾನಂದ ನಾಯ್ಕ್ ಕೂಡ ಲಿಂಬೆ ಕೃಷಿಯಲ್ಲಿ ತೊಡಗಿಸಿ ಉಳಿದ ರೈತರಿಗೂ ಮಾಹಿತಿ ನೀಡುತ್ತಿದ್ದಾರೆ.
ನಿಂಬೆ ಕೃಷಿಗೆ ವಾರಕ್ಕೆ ಒಮ್ಮೆ ನೀರು ನೀಡಿದ್ರೆ ಸಾಕು. 25 ವರ್ಷ ಕಾಲ ಉತ್ತಮ ಇಳುವರಿ ಪಡೆಯಬಹುದು. ಹೆಚ್ಚು ಕೆಲಸವೂ ಇಲ್ಲಿಲ್ಲ. ಸದ್ಯ ಕರಾವಳಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ, ಧಾರಣೆ ನಿಂಬೆಗಿದೆ.
ಒಟ್ಟಾರೆ ಮಣ್ಣಿನಲ್ಲಿ ದುಡಿದವರಿಗೆ ಮೋಸವಿಲ್ಲ ಎಂಬ ಮಾತಿದೆ. ಮಣ್ಣು ಇಂದಲ್ಲ ನಾಳೆ ಕೈ ಹಿಡಿದೇ ಹಿಡಿಯುತ್ತೆ. ಶ್ರದ್ಧೆಯಿಂದ ದುಡಿದರೆ ಕರಾವಳಿ ಮಣ್ಣಲ್ಲೂ ಭರ್ಜರಿ ಬೆಳೆ ತೆಗೆದು ಲಾಭ ಪಡೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ ಸದಾನಂದ ನಾಯ್ಕರು.
PublicNext
27/02/2022 12:49 pm